ಹಮದಾಬಾದ್: ಅಯೋಧ್ಯೆಯ ರಾಮ ಮಂದಿರಕ್ಕೆ ನೇಮಕವಾದ ಅರ್ಚಕರೊಬ್ಬರದ್ದು ಎಂದು ನಂಬುವಂತೆ ಅದೇ ಹೋಲಿಕೆಯ ಬೇರೊಬ್ಬ ವ್ಯಕ್ತಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪದಡಿ ಹಿತೇಂದ್ರ ಪೀಠಾಡಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಹಿತೇಂದ್ರ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಮುಖ್ಯಸ್ಥ ಎಂದು ಹೇಳಲಾಗುತ್ತಿದೆ.
ಮೋಹಿತ್ ಪಾಂಡೆ ಎಂಬುವವರು ಅಯೋಧ್ಯೆಯ ರಾಮ ಮಂದಿರದಲ್ಲಿ ಅರ್ಚಕರಾಗಿ ನೇಮಕಗೊಂಡಿದ್ದರು. ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆ ಸಲ್ಲಿಕೆಯಾಗುತ್ತಿದೆ. ಈ ಮಧ್ಯೆ ಅದೇ ಪಾಂಡೆಯನ್ನು ಹೋಲುವ ವ್ಯಕ್ತಿಯ ಅಶ್ಲೀಲ ಚಿತ್ರವನ್ನು ರೂಪಿಸಲಾಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಅಶ್ಲೀಲ ಚಿತ್ರವನ್ನು ‘ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲಾಗಿದೆ ಎಂದು ಪೊಲೀಸ್ ದೂರು ಸಲ್ಲಿಕೆಯಾಗಿದ್ದು, ಎಫ್ಐಆರ್ ದಾಖಲಿಸಲಾಗಿತ್ತು.