ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ: ಐವರು ಪ್ರಮುಖ ಆರೋಪಿಗಳು ಖುಲಾಸೆ

Prasthutha|

ಮಂಗಳೂರು: ಟಾರ್ಗೆಟ್ ಇಲ್ಯಾಸ್‌ ಗ್ಯಾಂಗ್‌ ಎಂಬ ತಂಡ ಮುನ್ನಡೆಸುತ್ತಿದ್ದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಐವರು ಆರೋಪಿಗಳನ್ನು ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಿದೆ. ದಾವೂದ್, ಶಮೀರ್, ನಮೀರ್, ರಿಯಾಝ್ ಮತ್ತು ಅಬ್ದುಲ್ ಖಾದರ್ ಆರೋಪದಿಂದ ಖುಲಾಸೆಯಾದವರು.

- Advertisement -

2018ರ ಡಿಸೆಂಬರಿನಲ್ಲಿ ಟಾರ್ಗೆಟ್ ಇಲ್ಯಾಸ್‌ ಕಂಕನಾಡಿಯ ಜೆಪ್ಪು ಬಪ್ಪಾಲ್‌ನ ಹೆಂಡ್ತಿ ಮನೆಯಲ್ಲಿದ್ದಾಗ ಬೆಳ್ಳಂಬೆಳಗ್ಗೆ ಕಡಿದು ಭೀಕರ ಹತ್ಯೆ ಮಾಡಲಾಗಿತ್ತು. ಕೃತ್ಯದ ಬಗ್ಗೆ ಪಾಂಡೇಶ್ವರ ಇನ್ಸ್ ಪೆಕ್ಟರ್ ಆಗಿದ್ದ ಕೆ.ಯು. ಬೆಳ್ಳಿಯಪ್ಪ ತನಿಖೆ ನಡೆಸಿದ್ದರು.

ಪ್ರಕರಣದಲ್ಲಿ 9 ಮಂದಿಯನ್ನು ಆರೊಪಿಗಳಾಗಿ ಗುರುತಿಸಲಾಗಿತ್ತು. ಅದರಲ್ಲಿ ದಾವೂದ್ ಮತ್ತು ಮಹಮ್ಮದ್ ಶಮೀರ್ ಪ್ರಮುಖ ಆರೋಪಿಗಳೆಂದು ಹೇಳಲಾಗಿತ್ತು. 54 ಮಂದಿಯ ಸಾಕ್ಷ್ಯವನ್ನು ಒಳಗೊಂಡು ಸಮಗ್ರ ಚಾರ್ಜ್ ಶೀಟನ್ನು ಕೋರ್ಟಿಗೆ ಸಲ್ಲಿಕೆ ಮಾಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಘಟನೆಗೆ ಪ್ರತ್ಯಕ್ಷದರ್ಶಿಗಳಾಗಿದ್ದ ಮೃತ ಇಲ್ಯಾಸ್ ಭಾವ ಮತ್ತು ಅತ್ತೆಯನ್ನು ಒಳಗೊಂಡಂತೆ 25 ಮಂದಿ ಸಾಕ್ಷಿಗಳನ್ನು ಕರೆಸಿತ್ತು. ಟಾರ್ಗೆಟ್ ಗ್ಯಾಂಗಿನಲ್ಲೇ ಇದ್ದ ದಾವೂದ್ ಮತ್ತು ಸಮೀ‌ರ್ ಹಳೆ ವೈರತ್ವದಿಂದ ಇಲ್ಯಾಸನ್ನು ಕೊಲೆ ಮಾಡಿದ್ದಾಗಿ ಚಾರ್ಜ್ ಶೀಟಿನಲ್ಲಿ ತಿಳಿಸಲಾಗಿತ್ತು.

- Advertisement -

ಜಿನೇಂದ್ರ ಕುಮಾರ್ ನೇತೃತ್ವದ ವಕೀಲರ ತಂಡವು ಆರೋಪಿಗಳ ಪರ ವಾದಿಸಿ, ಪೊಲೀಸರು ಸಲ್ಲಿಸಿದ್ದ ಸಾಕ್ಷಾಧಾರಗಳನ್ನು ಸವಾಲು ಮಾಡಿ ವಕಾಲತ್ತಿನಲ್ಲಿ ಸೋಲಿಸಿದೆ. ಪರಿಣಾಮವಾಹಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬಂಧಿಸಲ್ಪಟ್ಟಿದ್ದ ಐವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಪ್ರಕರಣದ ಇತರ ಆರೋಪಿಗಳಾದ ಉಮರ್ ನವಾಫ್, ಮುಹಮ್ಮದ್ ನಝೀರ್, ಅಸ್ಲರ್ ಆಲಿ, ನೌಶಾದ್ ಎಂಬವರು ಪೊಲೀಸರ ಕೈಗೆ ಇಲ್ಲಿವರೆಗೂ ಸಿಗದೆ ತಲೆಮರೆಸಿಕೊಂಡಿದ್ದಾರೆ.



Join Whatsapp