ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾಪ ಬಂದರೆ ಸಕಾರಾತ್ಮಕ ಚರ್ಚೆ ನಡೆಸುತ್ತೇವೆ: ಡಿ.ಕೆ.ಶಿವಕುಮಾರ್

Prasthutha|

ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಸದನದಲ್ಲಿ ಪ್ರಸ್ತಾಪ ಬಂದರೆ ಖಂಡಿತವಾಗಿಯೂ ಸಕಾರಾತ್ಮಕ ಚರ್ಚೆ ನಡೆಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

- Advertisement -

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆ ವಿಭಜನೆ ಕುರಿತು ಮೇಲಿಂದ ಮೇಲೆ ಧ್ವನಿ ಕೇಳಿಬರುತ್ತಿದೆ. ಸದನದಲ್ಲಿ ಚರ್ಚಿಸೋಣ’ ಎಂದರು. ‘ಸುವರ್ಣ ವಿಧಾನಸೌಧದಲ್ಲಿ ವೀರ ಸಾವರ್ಕರ್ ಫೋಟೊ ತೆರವು ಮಾಡುವ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಸಿದ ಅವರು, ‘ಆ ಸಚಿವರ ಹತ್ತಿರವೇ ಮಾತನಾಡಿ. ಭಾವಚಿತ್ರ ಹಾಕುವುದು, ಬಿಡುವುದು ಸಭಾಧ್ಯಕ್ಷರ ವಿಚಾರಕ್ಕೆ ಬಿಟ್ಟಿದ್ದು’ ಎಂದರು.



Join Whatsapp