ಗುತ್ತಿಗೆದಾರರ ಬಿಲ್ ವಿಳಂಬ: ಬಿಜೆಪಿಯವರೇ ನೇರ ಕಾರಣ ಎಂದ ಸತೀಶ ಜಾರಕಿಹೊಳಿ

Prasthutha|

ಮುದ್ದೇಬಿಹಾಳ: ಗುತ್ತಿಗೆದಾರರ ಬಿಲ್ ವಿಳಂಬದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದ್ದಾರೆ‌. ಈ ವಿಳಂಬಕ್ಕೆ ಬಿಜೆಪಿಯವರೇ ನೇರ ಕಾರಣ ಎಂದು ಹೇಳಿದ್ದಾರೆ.

- Advertisement -

ಸುರಪೂರ ತಾಲೂಕಿನ ಕಕ್ಕೇರಿಯಿಂದ ಪಟ್ಟಣದ ಮಾರ್ಗವಾಗಿ ಆಲಮಟ್ಟಿಗೆ ತೆರಳುತ್ತಿದ್ದ ಸಚಿವರು, ವಿದ್ಯಾನಗರದಲ್ಲಿ ತಮ್ಮ ಆಪ್ತರ ಮನೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಹಿಂದಿನ ಸರ್ಕಾರ ಡಬ್ಬಲ್ ಖರ್ಚು ಮಾಡಿದೆ. ಅವರು ಹೆಚ್ಚಿಗೆ ಮಾಡಿಟ್ಟಿದ್ದಕ್ಕೆ ಗುತ್ತಿಗೆದಾರರಿಗೆ ಬಿಲ್ ಕೊಡುವುದಕ್ಕೆ ಆಗುತ್ತಿಲ್ಲ. ಅದು ಸರಿ ಹೋಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ‌ರು.

- Advertisement -

ಬಜೆಟ್‌ನಲ್ಲಿ ನಮ್ಮ ಇಲಾಖೆಗೆ ನೂರು ರೂಪಾಯಿ ಕೊಟ್ಟಿದ್ದರೆ ಖರ್ಚು ಮಾಡಿದ್ದು 300 ರೂಪಾಯಿ. ಹಣಕಾಸು ಇಲಾಖೆಯಿಂದ ನಮಗೆ ನೂರು ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ ಸಣ್ಣ ನೀರಾವರಿ, ಪಿಡಬ್ಲ್ಯೂಡಿ, ನೀರಾವರಿ ಸೇರಿ ಹಿಂದಿನ ಸರ್ಕಾರ ₹4000 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಿದೆ. ಆದರೆ ಕೊಟ್ಟಿದ್ದು ₹2 ಸಾವಿರ ಕೋಟಿ ಮಾತ್ರ. ಬಜೆಟ್‌ನಲ್ಲಿ ಹಂಚಿಕೆಯಾಗಿರುವಷ್ಟೇ ನಮಗೆ ಕೊಟ್ಟಿದ್ದಾರೆ ಎಂದರು.

ಸಚಿವರ ಜೊತೆಗೆ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ (ಕೊಣ್ಣೂರ), ವೈ.ಎಚ್.ವಿಜಯಕರ್, ಗುತ್ತಿಗೆದಾರ ಯಲ್ಲಪ್ಪ ಚಲವಾದಿ, ಕಾಂಗ್ರೆಸ್ ಮುಖಂಡ ಹುಲಗಪ್ಪ ನಾಯ್ಕಮಕ್ಕಳ, ಪವನಕುಮಾರ್ ಧನ್ನೂರ, ಮೊದಲಾದವರು ಇದ್ದರು. ಇದೇ ವೇಳೆ ಮೆಚ್ಚಿನ ಸಚಿವ ಜಾರಕಿಹೊಳಿಯನ್ನು ಅಭಿಮಾನಿಗಳು ಸನ್ಮಾನಿಸಿದರು.



Join Whatsapp