ಡಿ.19 ರಂದು ದೆಹಲಿಯಲ್ಲಿ ‘INDIA’ದ ನಾಲ್ಕನೇ ಸಭೆ

Prasthutha|

ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19 ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

- Advertisement -

ಡಿಸೆಂಬರ್ 17ರ ಸಭೆಯನ್ನು ಮುಂದೂಡಿದ್ದಕ್ಕೆ ಯಾವುದೇ ಕಾರಣಗಳನ್ನು ನೀಡದ ಅವರು, ಡಿ.19ಕ್ಕೆ ಎಲ್ಲ ಸದಸ್ಯ ಪಕ್ಷಗಳು ಭಾಗವಹಿಸಲಿವೆ ಎಂದಿದ್ದಾರೆ.

ಮೊದಲು ಡಿಸೆಂಬರ್ 6 ರಂದು ಸಭೆ ಮೊದಲು ಕರೆಯಲಾಗಿತ್ತು. ಬಳಿಕ ಡಿಸೆಂಬರ್ 17 ಕ್ಕೆ ಮುಂದೂಡಲಾಯಿತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಮೈತ್ರಿಕೂಟದ ಉನ್ನತ ನಾಯಕರು ಗೈರು ಹಾಜರಿಗೆ ನಿರ್ಧರಿಸಿದ ನಂತರ ಸಭೆಯನ್ನು ಮುಂದೂಡಲಾಗಿತ್ತು.



Join Whatsapp