ಧಾರವಾಡ: ಸುವರ್ಣ ವಿಧಾನಸೌಧದ ಸಾವರ್ಕರ್ ಫೋಟೋ ವಿವಾದ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ತೆಗೆದುಕೊಂಡ ನಿಲುವಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಜೋಶಿ, ಸಾವರ್ಕರ್ ಫೋಟೋ ವಿಷಯದಲ್ಲಿ ವಿಧಾನಸಭೆ ಸ್ಪೀಕರ್ ನಿಲುವಿಗೆ ಅಭಿನಂದಿಸುತ್ತೇನೆ. ನಾನು ಕಿತ್ತು ಒಗೆಯಲು ಬಂದಿಲ್ಲ, ಜೋಡಿಸಲು ಬಂದಿದ್ದೇನೆ ಎಂದಿದ್ದಾರೆ. ಈ ನಿಲುವು ಹಾಗೆಯೇ ಇರಬೇಕು ಆಗ ಸದನ ಯಾವುದೇ ವಿವಾದ ಇಲ್ಲದೇ ನಡೆಯುತ್ತದೆ ಎಂದಿದ್ದಾರೆ.