ಸಕಲೇಶಪುರ: ಇಲ್ಲಿನ ಚಿಕ್ಕಕಲ್ಲೂರು ಗ್ರಾಮಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟಿವೆ. ಈ ಗುಂಪಿನಲ್ಲಿ ಅರ್ಜುನನನ್ನು ಕೊಂದಿರುವ ಕಾಡಾನೆಯೂ ಸೇರಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಆನೆಗಳ ಗುಂಪಿನಲ್ಲಿ ನಾಲ್ಕು ಸಲಗಗಳು ಹಾಗೂ ಒಂದು ಮರಿ ಸೇರಿಕೊಂಡಿವೆ. ಆನೆಗಳು ಓಡಾಡುವ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ಗುಂಪಿನಲ್ಲಿ ಅರ್ಜುನನ್ನು ಕೊಂದಿರುವ ಆನೆ ಸೇರಿಕೊಂಡಿರುವುದನ್ನು ಅರಣ್ಯ ಇಲಾಖೆಯ ಆರ್ಆರ್ಟಿ ಹಾಗೂ ಇಟಿಎಫ್ ಸಿಬ್ಬಂದಿ ಗುರುತಿಸಿದ್ದಾರೆ.