ನವದೆಹಲಿ: ಸಾಕಷ್ಟು ವಿಳಂಬದ ಬಳಿಕ ಕೊನೆಗೂ ಭಾರತ ಕುಸ್ತಿ ಫೆಡರೇಷನ್ನ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 21ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಫಲಿತಾಂಶವು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಂದಿರುವ ಅರ್ಜಿ ವಿಚಾರಣೆಯ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಚುನಾವಣಾ ಅಧಿಕಾರಿ ನ್ಯಾ.(ನಿವೃತ್ತ) ಎಂ.ಎಂ.ಕುಮಾರ್ ಕಚೇರಿಯ ಹೇಳಿಕೆ ತಿಳಿಸಿದೆ.
ಭಾರತ ಕುಸ್ತಿ ಫೆಡರೇಷನ್ ಚುನಾವಣೆ
ವಿವಿಧ ಕೋರ್ಟ್ ತಡೆಯಾಜ್ಞೆಗಳಿಂದ ಮೂರು ಬಾರಿ ಮುಂದಕ್ಕೆ ಹೋಗಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೆರವುಗೊಳಿಸಿತ್ತು.