ಸ್ವತಂತ್ರ ಭಾರತದಲ್ಲಿ ಗಲ್ಲಿಗೇರಲಿರುವ ಪ್ರಥಮ ಮಹಿಳೆ | ಈಕೆ ಮಾಡಿದ ಅಪರಾಧವಾದರೂ ಏನು? ಇಲ್ಲಿದೆ ವಿವರ

Prasthutha|

ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸುವ ಸಿದ್ಧತೆ ನಡೆಯುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕೊಲೆ ಪ್ರಕರಣದ ಇಬ್ಬರು ಆಪರಾಧಿಗಳಲ್ಲಿ ಒಬ್ಬಳಾದ ಉತ್ತರ ಪ್ರದೇಶ, ಮಥುರಾ ಜಿಲ್ಲೆಯ ಶಬ್ನಂ ಎಂಬ ಮಹಿಳೆಗೆ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.

- Advertisement -

ತಾನು ಪ್ರೀತಿಸಿದ ಸಲೀಂ ಎಂಬಾತನನ್ನು ಮದುವೆ ಆಗಲು ನಿರಾಕರಿಸಿದಕ್ಕಾಗಿ 2008 ಎಪ್ರಿಲ್ 05 ರಂದು ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದ ಹಿನ್ನಲೆಯಲ್ಲಿ ಈ ಶಿಕ್ಷೆ ಜಾರಿಯಾಗಿದೆ. ನಿದ್ರೆಮಾತ್ರೆಯನ್ನು ಹಾಲಲ್ಲಿ ಬೆರೆಸಿ ಕೊಲೆ ಮಾಡಿದ ಈಕೆ, ತನ್ನ ಸಣ್ಣ ಸೋದರಳಿಯನನ್ನೂ ಬಿಡದೆ ಕತ್ತು ಹಿಸುಕಿ ಸಾಯಿಸಿದ್ದಳು.

ಪ್ರಾರಂಭದಲ್ಲಿ ಮನೆಗೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ಶಬ್ನಂ ನಟನೆ ಮಾಡಿದ್ದಳು. ಆದರೆ ಆ ಬಳಿಕ ಸತ್ಯ ಬೆಳಕಿಗೆ ಬಂದು ಸೆಷನ್ಸ್ ನ್ಯಾಯಾಲಯ ಇಬ್ಬರಿಗೆ ಮರಣದಂಡನೆ ವಿಧಿಸಿತ್ತು. ಅಪರಾಧಿಗಳು ತೀರ್ಪನ್ನು ಅಲಹಾಬಾದ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿತ್ತು.

- Advertisement -

ಈ ಮೂಲಕ ಶಬ್ನಂ ಸ್ವತಂತ್ರ ಭಾರತದಲ್ಲಿ ಗಲ್ಲಿಗೇರಿಸಲ್ಪಡುವ ಮೊದಲ ಮಹಿಳೆಯಾಗಿದ್ದಾಳೆ. ಗಲ್ಲಿಗೇರುವ ದಿನ ಯಾವುದೆಂದು ಇನ್ನೂ ಅಂತಿಮಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ.



Join Whatsapp