ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಲಘು ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ.
- Advertisement -
ವಿಜಯಪುರ ತಾಲ್ಲೂಕಿನ ಉಕುಮನಾಳ ಗ್ರಾಮ ಭೂಕಂಪನದ ಕೇಂದ್ರಬಿಂದುವಾಗಿದೆ. ಬೆಳಿಗ್ಗೆ 6.52ಕ್ಕೆ ಭೂಮಿ ನಡುಗಿದ ಹಾಗೂ ಭೂಮಿ ಒಳಗಿನಿಂದ ದೊಡ್ಡ ಶಬ್ಧ ಕೇಳಿಬಂದಿದೆ. ಭಯಭೀತರಾದ ಜನ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.