ಲಖನೌ: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದ ಡಿಎಂಕೆ ವಿರುದ್ಧ ಅದರ ‘INDIA’ ಮೈತ್ರಿಕೂಟದ ಮಿತ್ರ, ಸಮಾಜವಾದಿ ಪಕ್ಷ ಕಿಡಿಗಾರಿದೆ. ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಆಪ್ತ ಐಪಿ ಸಿಂಗ್ ಸತಾತನ ಧರ್ಮದ ವಿರುದ್ಧದ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Xನಲ್ಲಿ ಸಿಂಗ್ ಪೋಸ್ಟ್ ಮಾಡಿದ್ದು, ಡಿಎಂಕೆ ನಾಯಕರು ಸನಾತನ ಧರ್ಮವನ್ನು ತ್ಯಜಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಯಾರಾದರೂ ಇಸ್ಲಾಂ ಧರ್ಮವನ್ನು ಅಪಹಾಸ್ಯ ಮಾಡಲು ಮುಂದಾದರೆ, ಮುಸ್ಲಿಂ ಸಮುದಾಯವು ಅದರ ವಿರುದ್ಧ ನಿಲ್ಲುತ್ತದೆ ಮತ್ತು ಅದಕ್ಕಾಗಿ ಜೀವವನ್ನು ತ್ಯಾಗ ಮಾಡಲು ಯಾವಾಗಲೂ ಸಿದ್ಧರಿರುವ ಮೂಲಕ ತನ್ನ ನಂಬಿಕೆಯನ್ನು ರಕ್ಷಿಸುತ್ತದೆ. ಮತ್ತೊಂದೆಡೆ, ಕೆಲವು ವಿಲಕ್ಷಣ ಹಿಂದೂಗಳು ಪ್ರತಿದಿನ ತಮ್ಮ ದೇವರು ಮತ್ತು ದೇವತೆಗಳು, ವೇದಗಳು, ಪುರಾಣಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಐಪಿ ಸಿಂಗ್ ಎಕ್ಸ್ ಅಸಹನೆ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಅವರೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದಾರೆ. ಡಿಎಂಕೆ INDIA ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾಗಿದೆ.