ಪಂಜಾಬ್ ಸ್ಥಳೀಯಾಡಳಿತ ಚುನಾವಣೆ | ಕಾಂಗ್ರೆಸ್ ಗೆ ಭರ್ಜರಿ ಜಯ; ಬಿಜೆಪಿಗೆ ತೀವ್ರ ಮುಖಭಂಗ

Prasthutha|

ಚಂಡೀಗಢ : ಬಿಜೆಪಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ನಡುವೆ ಪಂಜಾಬ್ ನಲ್ಲಿ ನಡೆದಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.

- Advertisement -

ಚುಣಾವಣೆ ನಡೆದಿರುವ ಪಂಚಾಯತ್ ನ ಏಳು ಮಹಾನಗರ ಪಾಲಿಕೆಗಳಲ್ಲಿ ಆರರಲ್ಲಿ ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿದೆ. ಮೊಗಾ, ಹೋಶಿಯಾರ್ ಪುರ, ಕಪುರ್ತಲ, ಅಬೋಹರ್, ಪಠಾಣ್ ಕೋಟ್, ಬಟಾಲ ಮತ್ತು ಬಠಿಂಡಾ ಪಾಲಿಕೆಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಮೊಹಾಲಿಯ ಫಲಿತಾಂಶ ನಾಳೆ ಹೊರಬೀಳಲಿದೆ. ಬಠಿಂಡಾದಲ್ಲಿ ಕಾಂಗ್ರೆಸ್ 53 ವರ್ಷಗಳ ಬಳಿಕ ಪಾಲಿಕೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಚ್ಚರಿಯ ಫಲಿತಾಂಶ ದಾಖಲಿಸಿದೆ.

ಬಠಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿದಳದ ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಾರೆ. ಶಿರೋಮಣಿ ಅಕಾಲಿದಳ ಇತ್ತೀಚೆಗಷ್ಟೇ ಬಿಜೆಪಿ ಮೈತ್ರಿಯನ್ನು ಮುರಿದುಕೊಂಡಿತ್ತು.

- Advertisement -

ಫೆ.14ರಂದು ರಾಜ್ಯದ 109 ನಗರ ಪಂಚಾಯತ್ ಮತ್ತು ಮುನ್ಸಿಪಲ್ ಕೌನ್ಸಿಲ್ ಮತ್ತು 8 ಮುನ್ಸಿಪಲ್ ಕಾರ್ಪೊರೇಶನ್ ಗಳಲ್ಲಿ ಚುನಾವಣೆ ನಡೆದಿತ್ತು.

ರೈತರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರದ ಕೃಷಿ ಕಾನೂನಿಗೆ ಪಂಜಾಬ್ ನ ರೈತರ ಪರವಾಗಿ ಮತದಾರರು ಬಿಜೆಪಿಗೆ ನೀಡಿರುವ ಭರ್ಜರಿ ಉತ್ತರ ಎಂದೇ ಅಭಿಪ್ರಾಯ ಪಡಲಾಗುತ್ತಿದೆ.  



Join Whatsapp