ಸ್ಟಾರ್ ಬಕ್ಸ್ ಗೆ ಬಾಯ್ಕಾಟ್ ಸಂಕಷ್ಟ: 11 ಬಿಲಿಯನ್ ಡಾಲರ್ ನಷ್ಟ

Prasthutha|

ವಾಷಿಂಗ್ಟನ್: ಮಾರಾಟದಲ್ಲಿ ಕುಸಿತ ಹಾಗೂ ಬಹಿಷ್ಕಾರಗಳು ಸ್ಟಾರ್ ಬಕ್ಸ್ ಕಾರ್ಪೊರೇಷನ್ ಮೇಲೆ ಕೂಡಾ ಪರಿಣಾಮ ಬೀರಿದ್ದು, ಅಂದಾಜು 11 ಬಿಲಿಯನ್ ಡಾಲರ್ ನಷ್ಟು ಕುಸಿತ ಕಂಡಿದೆ.

- Advertisement -

ಸ್ಟಾರ್ ಬಕ್ಸ್ ಕಾರ್ಪೊರೇಶನ್ ಸಂಸ್ಥೆಯ ಷೇರುಮೌಲ್ಯ ದಿನೇ ದಿನೇ ಕುಸಿಯುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಸ್ಟಾರ್ ಬಕ್ಸ್ ಷೇರುಸಂಪತ್ತು ಶೇ. 10ರ ಸಮೀಪದಷ್ಟು ಕರಗಿಹೋಗಿದೆ.

ಅದರಿಂದ ಆದ ನಷ್ಟ ಬರೋಬ್ಬರಿ 11 ಬಿಲಿಯನ್ ಡಾಲರ್. ಅಂದರೆ 90,000 ಕೋಟಿ ರೂಗೂ ಹೆಚ್ಚು ಮೊತ್ತದ ಷೇರುಸಂಪತ್ತು ಕುಗ್ಗಿಹೋಗಿದೆ.

- Advertisement -

ಸ್ಟಾರ್ ಬಕ್ಸ್ ವರ್ಕರ್ಸ್ ಯುನೈಟೆಡ್ ನಿಂದ ನವೆಂಬರ್ 16ರಂದು ಟ್ವೀಟ್ ಆಗಿತ್ತು. ಅದು ರೆಡ್ ಕಪ್ ಡೇ ಪ್ರಯುಕ್ತ ಮಾಡಿದ ಟ್ವೀಟ್ ಆಗಿದ್ದರೂ ಅದರಲ್ಲಿ ಇಸ್ರೇಲೀ ಜನರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಸ್ಟಾರ್ ಬಕ್ಸ್ ಮಾತ್ರವಲ್ಲ ಮ್ಯಾಕ್ ಡೊನಾಲ್ಡ್ ಮೊದಲಾದ ಸಂಸ್ಥೆಗಳೂ ಕೂಡ ಇಸ್ರೇಲ್ ಗೆ ಬೆಂಬಲ ವ್ಯಕ್ತಪಡಿಸಿದ್ದವು. ಇಂಥ ಎಲ್ಲಾ ಕಂಪನಿಗಳ ಮೇಲೂ ಬಾಯ್ಕಾಟ್ ಟ್ರೆಂಡ್ ಇದೆ. ಇಸ್ರೇಲಿಗರು ನಿರ್ವಹಿಸುತ್ತಿರುವ ಎಲ್ಲಾ ಉದ್ದಿಮೆಗಳಿಗೂ ಬಾಯ್ಕಾಟ್ ಭೀತಿ ಎದುರಾಗಿದೆ.



Join Whatsapp