ರಾಜಸ್ಥಾನ: ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆ, ಬಿಜೆಪಿ ಸಂಭ್ರಮ

Prasthutha|

ರಾಜಸ್ಥಾನ: ಆಡಳಿತರೂಢ ಕಾಂಗ್ರೆಸ್ ಹಿನ್ನಡೆ ಅನಭವಿಸುತ್ತಿದ್ದು, ಕೇಸರಿ ಪಡೆ ಕಮಾಲು ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ರಾಜ್ಯದೆಲ್ಲೇಡೆ ಸಂಭ್ರಮಿಸುತ್ತಿದ್ದಾರೆ.ರಸ್ತೆ, ರಸ್ತೆಗಳಲ್ಲಿ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ.

- Advertisement -

ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಕಮಲ ಅರಳುವುದು ಖಚಿತವಾಗಿದೆ. ಸತತ ಎರಡನೇ ಬಾರಿ ಅಧಿಕಾರ ಉಳಿಸಿಕೊಳ್ಳುವ ಗೆಹ್ಲೋಟ್ ಕನಸು ನನಸಾಗುವ ಸಾಧ್ಯತೆ ಕಡಿಮೆಯಾಗಿದೆ.

ಜೈಪುರದ ಪಕ್ಷದ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ . ರಾಜಸ್ಥಾನ ಒಟ್ಟು 199 ಸ್ಥಾನಗಳ ಪೈಕಿ, 113 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 69 ಸ್ಥಾನಗಳಲ್ಲಷ್ಟೇ ಮುನ್ನಡೆಯಲ್ಲಿದೆ.

- Advertisement -

ಆರಂಭಿಕ ಅಪ್​ಡೇಟ್ಸ್ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಪಿ ಜೋಶಿ ತಿಳಿಸಿದ್ದಾರೆ. ಈ ಮುನ್ನಡೆ ಮುಂದುವರಿದಿದೆ. ಬಿಜೆಪಿ ಸ್ಥಾನ ತಗ್ಗಿಲ್ಲ. ನಾವು 135 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಇದಲ್ಲದೇ, ಭಾರತ್ ಆದಿವಾಸಿ ಪಕ್ಷ ಎರಡು ಸ್ಥಾನಗಳಲ್ಲಿ, ಬಹುಜನ್ ಸಮಾಜ್ ಪಾರ್ಟಿ ಮೂರು ಸ್ಥಾನಗಳಲ್ಲಿ , ಸ್ವತಂತ್ರ್ಯ ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತಪಟ್ಟಿದ್ದು, ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಷೋದ್ಘಾರ ಮುಗಿಲು ಮುಟ್ಟಿದೆ.



Join Whatsapp