ಮೋದಿ ಚಿತ್ರವಿರುವ ‘ಸೆಲ್ಫಿ ಪಾಯಿಂಟ್‌’ ಸ್ಥಾಪಿಸಲು ವಿವಿಗಳಿಗೆ ಯುಜಿಸಿ ಸೂಚನೆ

Prasthutha|

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಿನ್ನೆಲೆಗೆ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದೇಶಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ಸೂಚಿಸಿದೆ ಎಂದು ಮಾದ್ಯಮವೊಂದು ವರದಿ ಮಾಡಿದೆ.
ನಿಮ್ಮ ಸಂಸ್ಥೆಯೊಳಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸುವ ಮೂಲಕ ನಮ್ಮ ದೇಶವು ಮಾಡಿದ ಅದ್ಭುತ ಪ್ರಗತಿಯನ್ನು ನಾವು ಆಚರಿಸೋಣ ಮತ್ತು ಪ್ರಸಾರ ಮಾಡೋಣ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳ ಬಗ್ಗೆ ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಹೊಸ ಉಪಕ್ರಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಸೆಲ್ಫಿ ಪಾಯಿಂಟ್‌ನ ಉದ್ದೇಶವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

- Advertisement -

ಆರ್‌ಎಸ್‌ಎಸ್ ನಾಯಕ ದತ್ತಾಜಿ ದಿದೋಲ್ಕರ್ ಜನ್ಮ ಶತಮಾನೋತ್ಸವ ಆಚರಿಸಲು ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒತ್ತಾಯಿಸಲಾದ ಘಟನೆ ನಡೆದಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಮಾಧ್ಯಮ ಕಳವಳ ವ್ಯಕ್ತಪಡಿಸಿದೆ.

ಯುಜಿಸಿ ದೇಶಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಬರೆದ ಪತ್ರಗಳಲ್ಲಿ ಸೆಲ್ಪಿ ತಾಣಗಳನ್ನು ಸೃಷ್ಟಿಸಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಮತ್ತು ಅವುಗಳನ್ನು ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಉತ್ತೇಜಿಸುವಂತೆ ಆಗ್ರಹಿಸಿದೆ.

- Advertisement -

ಈ ಬೆಳವಣಿಗೆಯ ಬಗ್ಗೆ ಹಲವಾರು ಶಿಕ್ಷಣ ತಜ್ಞರು ಆಕ್ಷೇಪಿಸಿದ್ದಾರೆ. ಸರ್ಕಾರವು ಪ್ರತಿಯೊಂದು ಸಾಮಾನ್ಯ ಸಾಧನೆಯನ್ನು ಅದ್ಭುತವೆಂದು ಬಿಂಬಿಸುತ್ತಿದೆ ಮತ್ತು ಅದರ ಕ್ರೆಡಿಟ್‌ ಪ್ರಧಾನಿಗೆ ಸಲ್ಲುತ್ತದೆ. ಸರಕಾರ ಅಥವಾ ಯುಜಿಸಿ ಇಂತಹ ಪ್ರಚಾರವನ್ನು ಉತ್ತೇಜಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಉನ್ನತ ಸಂಸ್ಥೆಯೊಂದರ ಅಧ್ಯಾಪಕರೋರ್ವರು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇಂತಹ ಸಲಹೆಗಳನ್ನು ಕಡೆಗಣಿಸಬೇಕು ಎಂದು ಹಲವರು ಹೇಳಿದ್ದಾರೆ.

ಯುಜಿಸಿಯು ಇಂತಹ ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ ಮತ್ತು ಅವುಗಳನ್ನು ನಿರ್ಲಕ್ಷಿಸಲು ಕ್ಯಾಂಪಸ್ ಆಡಳಿತಗಳು ಮುಕ್ತವಾಗಿವೆ ಎಂದು ಪ್ರಾಧ್ಯಾಪಕರೋರ್ವರು ಹೇಳಿದ್ದು,



Join Whatsapp