ಗಾಝಾ ಮೇಲೆ ಇಸ್ರೇಲ್‌ ದಾಳಿ ಮುಂದುವರಿಕೆ: ಕನಿಷ್ಠ 240 ಮಂದಿ ಸಾವು

Prasthutha|

ಗಾಝಾ:: ಗಾಝಾ ಮೇಲೆ ಇಸ್ರೇಲ್‌ ದಾಳಿ ಮುಂದುವರೆಸಿದ್ದು, ಕದನ ವಿರಾಮ ತೆರವಾದ ಬಳಿಕ (ಶುಕ್ರವಾರ ಬೆಳಿಗ್ಗೆಯಿಂದ) ಈವರೆಗೆ ಕನಿಷ್ಠ 240 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಹೇಳಿದೆ.

- Advertisement -

‘ಕದನ ವಿರಾಮ ಅಂತ್ಯಗೊಂಡ ನಂತರ ಯುದ್ಧ ವಿಮಾನಗಳು ಖಾನ್‌ ಯೂನಿಸ್‌ ನಗರದಲ್ಲಿ 50ಕ್ಕೂ ಹೆಚ್ಚು ನೆಲೆಗಳನ್ನು ನಾಶಪಡಿಸಿವೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಸ್ರೇಲ್ ಮತ್ತೆ ನಾಗರಿಕ ಹತ್ಯೆಯಲ್ಲಿ ತೊಡಗಿರೋದನ್ನು ಅಂತಾರಾಷ್ಟ್ರೀಯ ಸಂಘಟನೆಗಳು ಖಂಡಿಸಿವೆ. ಗಾಝಾ ಮೇಲೆ ಇಸ್ರೇಲ್‌ ದಾಳಿ ತೀವ್ರಗೊಳಿಸಿರುವುದರಿಂದ ನಾಗರಿಕರ ಸಾವು-ನೋವು ಹೆಚ್ಚಬಹುದೆಂದು ಅವು ಕಳವಳ ವ್ಯಕ್ತಪಡಿಸಿವೆ.



Join Whatsapp