ಸಿಒಪಿ-28 ಶೃಂಗಸಭೆ: ಕತಾರ್ ದೊರೆ ಭೇಟಿಯಾದ ಪ್ರಧಾನಿ ಮೋದಿ

Prasthutha|

ನವದೆಹಲಿ: ವಿಶ್ವಸಂಸ್ಥೆಯ ಕಾನ್ಫರೆನ್ಸ್‌ ಆಫ್‌ ಪಾರ್ಟೀಸ್‌(ಸಿಒಪಿ-28) ಜೊತೆಗೆ ನಡೆಯಲಿರುವ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯ ವೇಳೆ ಕತಾರ್ ದೊರೆ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಶುಕ್ರವಾರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.

- Advertisement -

ಕತಾರ್ ದೊರೆ ಅವರೊಂದಿಗಿನ ಚಿತ್ರವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದು, ದ್ವಿಪಕ್ಷೀಯ ಪಾಲುದಾರಿಕೆಯ ಸಾಧ್ಯತೆ ಮತ್ತು ಕತಾರ್ ನಲ್ಲಿರುವ ಭಾರತೀಯರ ಯೋಗಕ್ಷೇಮದ ಕುರಿತು ಧನಾತ್ಮಕ ಚರ್ಚೆ ನಡೆಸಿರುವುದಾಗಿ ಮೋದಿ ತಿಳಿಸಿದ್ದಾರೆ.



Join Whatsapp