ವಕೀಲರೊಂದಿಗೆ ಭೇಟಿ | ದಿಶಾ ರವಿಗೆ ಪ್ರತಿ ದಿನಕ್ಕೆ 30 ನಿಮಿಷಗಳ ಕಾಲಾವಕಾಶ ನೀಡಿದ ನ್ಯಾಯಾಲಯ

Prasthutha|

- Advertisement -

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ದಿಶಾ ರವಿ ತನ್ನ ವಕೀಲರನ್ನು ದಿನಕ್ಕೆ 30 ನಿಮಿಷಗಳ ಕಾಲ ಭೇಟಿ ಮಾಡಬಹುದೆಂದು ನ್ಯಾಯಾಲಯ ಆದೇಶಿಸಿದೆ. ದೆಹಲಿ ಪಟಿಯಾಲ ಹೌಸ್ ನ್ಯಾಯಾಲಯವು ಸಂಬಂಧಿಕರನ್ನು 15 ನಿಮಿಷಗಳ ಕಾಲ ಭೇಟಿಯಾಗಲು ಅವಕಾಶ ನೀಡಿದೆ.

ಚಳಿಯಿಂದ ರಕ್ಷಣೆ ಹೊಂದಲು ಬಟ್ಟೆ ಒದಗಿಸಲು ಕೂಡ ನ್ಯಾಯಾಲಯವು ಅನುಮತಿ ನೀಡಿದೆ. ದೆಹಲಿ ಪೊಲೀಸರ ತೀವ್ರ ವಿರೋಧದ ಹೊರತಾಗಿಯೂ ನ್ಯಾಯಾಲಯವು ಈ ಸೌಲಭ್ಯಗಳನ್ನು ಒದಗಿಸಲು ಆದೇಶಿಸಿದೆ. ಪಾಟಿಯಾಲ ಹೌಸ್ ನ್ಯಾಯಾಲಯದ ಆದೇಶವು ದಿಶಾ ಅವರ ಮುಂದಿನ ನಡೆಗಳಿಗೆ ಸಹಾಯಕವಾಗಲಿದೆ. ಅದೇ ವೇಳೆ ದಿಶಾ ರವಿ ಅವರನ್ನು ಬಂಧಿಸಿದ ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ನೋಟಿಸ್ ಕಳುಹಿಸಿ ಪೊಲೀಸರ ಕ್ರಮವನ್ನು ತೀವ್ರವಾಗಿ ಟಿಕಿಸಿದೆ.



Join Whatsapp