ಹಿಟ್ಲರ್ ಸಂತತಿಯ ಮನಸ್ಥಿತಿ ಇರುವುದು ದೇವೇಗೌಡರ ಕುಟುಂಬಕ್ಕೆ; ಡಾ.ಸಿ.ಎನ್. ಅಶ್ವತ್ಥನಾರಾಯಣ

Prasthutha|

ಪರಿಸರ ಕಾರ್ಯಕರ್ತೆ ದಿಶಾ ಬಂಧನದ ವಿರುದ್ಧ ಹಲವು ಸಂಘಟನೆಗಳು ಆಗಲೇ ಬೀದಿಗಿಳಿದಿವೆ.  ದೇಶದ್ರೋಹಿಗಳನ್ನು ಬೆಂಬಲಿಸುವ ಸಂಘಟನೆಗಳಿಗೆ ಇನ್ನು ಮುಂದೆ ಬೀದಿಯೇ ಗತಿಯಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ದಿಶಾ ಪರವಾಗಿ ಹೇಳಿಕೆ ನೀಡುವ ಡಿ.ಕೆ.ಶಿವಕುಮಾರ್ ಅವರಿಗೆ ಅಂಕಿತ್ ಶರ್ಮಾ ಕಗ್ಗೊಲೆ ಯಾಕೆ ಕಾಣಿಸುವುದೇ ಇಲ್ಲ ? ಹಾಸನಾಂಬೆ ದೇವಾಲಯದ ಬಗ್ಗೆ ತೋರಿಸುವ ಬದ್ಧತೆಯನ್ನು ಎಚ್.ಡಿ.ಕುಮಾರಸ್ವಾಮಿ ರಾಮಮಂದಿರದ ಬಗ್ಗೆ ಏಕೆ ತೋರಿಸುವುದಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದ್ದಕ್ಕೆ ಈ ದೇಶದ ಜನ ಆಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಬುದ್ದಿ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

- Advertisement -

ರಾಮನಗರ ಜಿಲ್ಲೆಯಲ್ಲಿ ತಾವೇ ಸ್ವತಃ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಿದ್ದೇನೆ. ಜನ ಸ್ವಯಂ ಸ್ಫೂರ್ತಿಯಿಂದ ದೇಣಿಗೆ ಕೊಟ್ಟಿದ್ದಾರೆ. ನಾವು ಯಾರ ಮೇಲೂ ಒತ್ತಡ ಹೇರಿಲ್ಲ. ಯಾರ ಮನೆಯ ಮೇಲೂ ಗುರುತು ಹಾಕಿಲ್ಲ. ಬಹುಶಃ ಕುಮಾರಸ್ವಾಮಿಯವರೇ ತಮ್ಮ ಮನೆಗೆ ಮಾರ್ಕ್ ಮಾಡಿಸಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಾಸನ ಜಿಲ್ಲೆಯ ದ್ಯಾಪಲಾಪುರ ಘಟನೆಯನ್ನು ಜನ ಇನ್ನೂ ಮರೆತಿಲ್ಲ. ಈ ರಾಜ್ಯದ ಹಿಟ್ಲರ್ ಸಂತತಿಯ ಮನಸ್ಥಿತಿ ಇರುವುದು ದೇವೇಗೌಡರ ಕುಟುಂಬಕ್ಕೆ ಮಾತ್ರ. ಕುಮಾರಸ್ವಾಮಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಈ ರೀತಿಯ ಪ್ರಚೋದನಕಾರಿ ಹೇಳಿಕೆಯಿಂದ ದೇಶದಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆ ಕುಮಾರಸ್ವಾಮಿಯವರೇ ಹೊಣೆಯಾಗುತ್ತಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದಾಗ, ತ್ರಿವಳಿ ತಲಾಕ್ ರದ್ದು ಮಾಡಿದಾಗ ಒಂದೇ ಒಂದು ಕೋಮುಗಲಭೆ ಆಗಲಿಲ್ಲ. ಸಿಎಎ ವಿರುದ್ದದ ಹೋರಾಟದಲ್ಲಿ ದೇಶದ್ರೋಹಿ ಸಂಘಟನೆಗಳು ಭಾಗಿಯಾಗಿ ಗಲಭೆ ಸೃಷ್ಟಿಸಿದ್ದವು ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.



Join Whatsapp