ಇಸ್ರೇಲ್: ಒಪ್ಪಂದದಂತೆ ಹಮಾಸ್ ಮತ್ತೆ 11 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಈ 11 ಜನರ ಬಿಡುಗಡೆಗೆ ಬದಲಾಗಿ ಇಸ್ರೇಲ್ 33 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.
ಹಮಾಸ್ನಿಂದ ಬಿಡುಗಡೆಯಾದವರಲ್ಲಿ ಶರೋನ್ ಅಲೋನಿ ಎಂಬ ಮಹಿಳೆ ಮತ್ತು ಆಕೆಯ ಮೂರು ವರ್ಷದ ಅವಳಿ ಮಕ್ಕಳಾದ ಎಮ್ಮಾ ಮತ್ತು ಯೂಲಿ ಸೇರಿದ್ದಾರೆ. 52 ದಿನಗಳ ನಂತರ ಅವರು ಹೊರಜಗತ್ತನ್ನು ಕಂಡಿದ್ದಾರೆ.
ಕದನ ವಿರಾಮ ಒಪ್ಪಂದವನ್ನು ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ. ನಂತರ ಕೈದಿಗಳು ಮತ್ತು ಒತ್ತೆಯಾಳುಗಳ ವಿನಿಮಯ ಮುಂದುವರಿಯಬಹುದು ಎಂದು ಅಂದಾಜಿಸಲಾಗಿದೆ.