ಬೆಳ್ತಂಗಡಿ | ಕಾರಿನ ಮೇಲೆ ಕಾಡಾನೆ ದಾಳಿ: ಇಬ್ಬರಿಗೆ ಗಾಯ

Prasthutha|

ಬೆಳ್ತಂಗಡಿ: ಕಾಡಾನೆಯೊಂದು ಕಾರಿಗೆ ದಾಳಿ ಮಾಡಿ ಇಬ್ಬರು ಗಾಯಗೊಂಡ ಘಟನೆ ಕಕ್ಕಿಂಜೆ-ನೆರಿಯ ರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

- Advertisement -


ಪುತ್ತೂರು ಮೂಲದ ಅಬ್ದುಲ್ ರೆಹಮಾನ್ ಮತ್ತು ನಾಸಿಯಾ ಗಾಯಾಳುಗಳು. ಆನೆ ಬರುವುದನ್ನು ನೋಡಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಕಾರಿನ ಬಳಿ ಬಂದ ಕಾಡಾನೆ ಕಾರಿನ ಮೇಲೆ ದಾಳಿ ನಡೆಸಿದೆ. ಕಾರಿನ ಮುಂಭಾಗವನ್ನು ಮೇಲಕ್ಕೆತ್ತಿದೆ. ಆನೆಯ ದಾಳಿಗೆ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.


ಬಳಿಖ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನತ್ತ ಅಟ್ಟಲು ಕ್ರಮ ಕೈಗೊಂಡಿದ್ದಾರೆ.



Join Whatsapp