ಉಡುಪಿ: ನೇಜಾರು ಒಂದೇ ಕುಟುಂಬದ ಹತ್ಯೆಗೆ ಸಂಬಂಧಿಸಿದಂತೆ ಮಂಗಳೂರಿನ ರೂಂನಲ್ಲಿ ಪತ್ತೆಯಾದ ಸ್ಕೂಟರ್ಗೆ ನನ್ನ ಮಗಳು 28,000 ರೂಪಾಯಿ ನೀಡಿ ಖರೀದಿಸಿದ್ದಳು ಎಂದು
ಐನಾಝ್ ತಂದೆ ನೂರ್ ಮೊಹಮ್ಮದ್ ಸ್ಪಷ್ಟನೆ ನೀಡಿದ್ದಾರೆ.
ಆರೋಪಿ ಪ್ರವೀಣ್ ಚೌಗಲೆ ಗಗನಸಖಿ ಐನಾಝ್ ಗೆ ತನ್ನ ಸ್ಕೂಟರ್ ನೀಡಿದ್ದ ಎಂದು ವರದಿಯಾಗಿತ್ತು. ಪ್ರವೀಣ್ ಚೌಗುಲೆ ತನಗಾಗಿ ಹೊಸ ಕಾರನ್ನು ಖರೀದಿಸಿದ್ದರಿಂದ ಸ್ಥಳೀಯ ಪ್ರಯಾಣಕ್ಕೆ ಬಳಸುವುದಕ್ಕಾಗಿ ನನ್ನ ಮಗಳಿಗೆ ಸ್ಕೂಟರ್ ನೀಡಿದ್ದರು. ಆದರೆ ನನ್ನ ಮಗಳು ಸ್ಕೂಟರ್ ಗಾಗಿ 28,000 ರೂ ಪಾವತಿಸಿದ್ದಾಳೆ ಮತ್ತು ಮುಂದಿನ ಮೂರು ತಿಂಗಳಲ್ಲಿ ಅದನ್ನು ಅವಳ ಹೆಸರಿಗೆ ನೋಂದಾಯಿಸಲಾಗುವುದು ಎಂದು ನನಗೆ ತಿಳಿಸಿದ್ದಳು ಎಂದು ಹೇಳಿದರು.
ನನ್ನ ಮಗಳು ನೆಲೆಸಲು ಕೋಣೆ ಸಿಗದೆ ಕಷ್ಟಪಟ್ಟು ಆರೋಪಿಯ ಸಹಾಯ ಪಡೆದಿದ್ದಳು. ಸಾಮಾನ್ಯವಾಗಿ ಮುಸ್ಲಿಂ ಹುಡುಗಿಯರಿಗೆ ಬಾಡಿಗೆ ರೂಂ ಅಷ್ಟು ಸುಲಭವಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಕೆ ಆತನ ಸಹಾಯವನ್ನು ಕೇಳಿದ್ದಾಳೆ ಎಂದು ಹೇಳಿದ್ದಾರೆ.