ಕೊಪ್ಪಳ: ಅಂದಿನ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು ಎಂದು ಆ ತನಿಖೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರ ಹಿಂಪಡೆಯುವುದಾದರೆ, ಅಂದಿನ ಬಿಜೆಪಿ ಸರ್ಕಾರ ಮುಸ್ಲಿಮರ ವಿರುದ್ಧ ದ್ವೇಷಕ್ಕಾಗಿ ಹುಬ್ಬಳ್ಳಿ, ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯ ಅಮಾಯಕ ಮುಸ್ಲಿಂ ಯುವಕರ ಮೇಲ್ ಹಾಕಿರುವ ಸುಳ್ಳು ಪ್ರಕರಣಗಳು ವಾಪಸ್ ಪಡೆಯುವುದು ಯಾವಾಗ ಎಂದು ಎಸ್ಡಿಪಿಐ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಹೇಳಿಕೆ ನೀಡಿದ ಅಬ್ದುಲ್ ಮಜೀದ್, ವಿಧಾನಸಭಾ ಚುನಾವಣೆಗು ಮುನ್ನ ಬಿಜೆಪಿ ರದ್ದುಪಡಿಸಿದ್ದ 2B ಮೀಸಲಾತಿಯನ್ನು ನಾವು ಮರುಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರಕಾರ ಅದನ್ನೂ ಈಡೇರಿಸಲು ಇನ್ನು ಎಷ್ಟು ದಿನ ಬೇಕು ಎಂದೂ ಪ್ರಶ್ನಿಸಿದ್ದಾರೆ.