‘ಕಾಂತಾರ’ ಸಿನೆಮಾದಲ್ಲಿ ಪದಕ ಗೆದ್ದ ಕೋಣಗಳು ಬೆಂಗಳೂರು ಕಂಬಳದಲ್ಲಿ ಪ್ರಥಮ

Prasthutha|

ಬೆಂಗಳೂರು: ರಿಷಬ್ ಶೆಟ್ಟಿಯ ನಿರ್ದೇಶನ ಮತ್ತು ನಾಯಕ ನಟನೆಯ ಯಶಸ್ವಿ ಚಿತ್ರ ಕಾಂತಾರದಲ್ಲಿ ಕಂಬಳ ತೋರಿಸಲಾಗಿತ್ತು. ಚಿತ್ರದಲ್ಲಿ ಹೀರೋ ಶಿವ ಪಾತ್ರಧಾರಿ ಓಡಿಸಿದ ಕೋಣಗಳು ಪದಕ ಗೆಲ್ಲುತ್ತದೆ. ಇದೀಗ ರಿಯಲ್ ಕಂಬಳದಲ್ಲೂ ಈ ಕೋಣಗಳು ಪ್ರಶಸ್ತಿ ಗೆದ್ದು ಸುದ್ದಿ ಮಾಡಿವೆ. ಕಾಂತಾರದಲ್ಲಿ ಇದ್ದ ಅದೇ ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗವಹಿಸಿದ್ದು, ಮೊದಲ ಸ್ಥಾನ ಪಡೆದುಕೊಂಡಿವೆ.

- Advertisement -

ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಬೆಂಗಳೂರು ಕಂಬಳದಲ್ಲಿ ಕಾಂತಾರ ಶಿವ ಓಡಿಸಿದ್ದ ಅಪ್ಪು-ಕಿಟ್ಟಿ ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಪಡೆದುಕೊಂಡಿದೆ. ಇವು ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರಿಗೆ ಸೇರಿದ ಕೋಣಗಳಾಗಿವೆ.




Join Whatsapp