‘ತುಳು’ ರಾಜ್ಯದ ಹೆಚ್ಚುವರಿ ಭಾಷೆಯಾಗಲಿದೆ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ತುಳು ಭಾಷಿಗಳ ಬಹು ದಿನಗಳ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಮಾಡುವುದರ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

- Advertisement -

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಕಂಬಳ ಕಾರ್ಯಕ್ರಮದಲ್ಲಿ ಸಿಎಂ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರು ಕಂಬಳ ಸಮಿತಿಯು ಸಮುದಾಯ ಭವನದ ಬೇಡಿಕೆ ಇಟ್ಟಿದ್ದು ಇದರ ಪ್ರಯತ್ನವನ್ನು ಕೂಡ ಮಾಡುತ್ತೇವೆ ಎಂದು ಅವರು ಹೇಳಿದರು.

ಕೋರ್ಟ್​ನಲ್ಲಿ ಕಂಬಳಕ್ಕೆ ತಡೆ ಬಂದಾಗ ನಾನೇ ಸುಗ್ರಿವಾಜ್ಞೆ ಹೊರಡಿಸಿದ್ದೆ. ಜಲ್ಲಿಕಟ್ಟು ರೀತಿ ಇದು ಕೆಟ್ಟದ್ದು ಅಲ್ಲ. ಇದು ಸಾಮಾನ್ಯ ಜನರ ಕ್ರೀಡೆ. ಇದನ್ನು ಉಳಿಸುವ ಕೆಲಸ ಮಾಡಿದೆ ಎಂದು ಸಿಎಂ ಹೇಳಿದರು.

- Advertisement -

ಇಬ್ಬರು ಮಂಗಳೂರು ಉಡುಪಿಯವರು ಸಿಕ್ಕರೆ ತುಳುವಿನಲ್ಲೇ ಮಾತು ಶುರು ಮಾಡುತ್ತಾರೆ. ಮಾತೃಭಾಷೆ ಬಗ್ಗೆ ಅವರಿಗೆ ಅಷ್ಟೊಂದು ಅಭಿಮಾನ ಇದೆ. ಇಂಗ್ಲೀಷ್ ಹಿಂದಿ ಬಂದರೂ ಬೇರೆ ಭಾಷೆ ಮಾತನಾಡಲ್ಲ ಎಂದು ಹೇಳಿದರು.

ತುಳು ಭಾಷಣೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆಗೊಳಿಸುವಂತೆ ಸ್ಪೀಕರ್ ಯುಟಿ ಖಾದರ್ ಅವರು ಮಾಡಿದ ಮನವಿಯನ್ನು ಭಾಷಣದ ವೇಳೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ತುಳುವನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಎಂದರು.




Join Whatsapp