13 ಇಸ್ರೇಲ್, 12 ಥಾಯ್ ಒತ್ತೆಯಾಳುಗಳನ್ನು ರಿಲೀಸ್ ಮಾಡಿದ ಹಮಾಸ್

Prasthutha|

ಗಾಝಾ: 13 ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಯ ಬಳಿಕ ಹಮಾಸ್ 12 ಥಾಯ್ ಒತ್ತೆಯಾಳುಗಳನ್ನು ರಿಲೀಸ್ ಮಾಡಿದೆ. 12 ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಭದ್ರತಾ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ಇನ್ನೊಂದು ಗಂಟೆಯಲ್ಲಿ ಅವರನ್ನು ಕರೆದೊಯ್ಯಲು ಹೊರಟಿದ್ದಾರೆ. ಅವರ ಹೆಸರುಗಳು ಮತ್ತು ವಿವರಗಳನ್ನು ಶೀಘ್ರದಲ್ಲೇ ತಿಳಿಯಬೇಕು ಎಂದು ಥಾಯ್ಲೆಂಡ್‌ ಪ್ರಧಾನಿ ಸ್ರೆಟ್ಟಾ ಥಾವಿಸಿನ್‌ ಎಕ್ಸ್‌ನಲ್ಲಿ ಹೇಳಿದ್ದಾರೆ.

- Advertisement -

ಒತ್ತೆಯಾಳುಗಳನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ. ಅವರು ರಫಾ ಗಡಿಗೆ ಹೋಗುತ್ತಿದ್ದಾರೆ. ಕೆಲವು ಇಸ್ರೇಲಿ ಒತ್ತೆಯಾಳುಗಳನ್ನು ಇಸ್ರೇಲ್‌ಗೆ ಹಿಂತಿರುಗಲು ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ವರದಿ ಮಾಡಲಾಗಿದೆ.

ಬಿಡುಗಡೆಯಾದವರಲ್ಲಿ ಮಕ್ಕಳು ಹಾಗು ಮಹಿಳೆಯರು ಸೇರಿದ್ದಾರೆ. ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ನಿನ್ನೆ ಬೆಳಿಗ್ಗೆ 7ಗಂಟೆಯಿಂದ ಆರಂಭಗೊಂಡಿದೆ. ಹಂತ, ಹಂತವಾಗಿ ಹಮಾಸ್‌‌ನಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಇಸ್ರೇಲ್‌ನಿಂದ 150 ಪ್ಯಾಲೆಸ್ತೀನ್ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿದೆ.



Join Whatsapp