ನಟ ಪ್ರಕಾಶ್ ರೈಗೆ ಇಡಿ ಸಮನ್ಸ್

Prasthutha|

ಬೆಂಗಳೂರು: ಬಹುಭಾಷಾ ನಟ ಹಾಗೂ ಬಿಜೆಪಿ ವಿರುದ್ಧವಾಗಿ ಪ್ರಶ್ನಿಸುತ್ತಿರುವ ಆಂದೋಲನ‌ ಮಾಡುತ್ತಿರುವ ಪ್ರಕಾಶ್ ರೈಗೆ ಇಡಿ ನೋಟಿಸ್ ನೀಡಿದೆ. ಚೆನ್ನೈ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

- Advertisement -

ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲ್ಲರಿಯ ಹಲವು ಶಾಖೆಗಳ ಮೇಲೆ ನವೆಂಬರ್ 20ರಂದು ಇಡಿ ದಾಳಿ ಮಾಡಲಾಗಿತ್ತು. ಈ ಸಮಯದಲ್ಲಿ ಇಡಿ ಅಧಿಕಾರಿಗಳು ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಈ ಜ್ಯುವೆಲ್ಲರಿಗಳಲ್ಲಿ ನೂರು ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ಪ್ರಕಾಶ್ ರಾಜ್ ಹೆಸರನ್ನು ಎಳೆದು ತರಲಾಗಿದೆ.

ಇಡಿ ನೋಟಿಸ್ ಬಗ್ಗೆ ನಟ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ತಿಳಿದುಬಂದಿದೆ.




Join Whatsapp