ಕೊಲ್ಲಾಪುರ ಬಳಿ ಬಸ್ ಪಲ್ಟಿ: ಮೂವರು ಸಾವು, 9 ಮಂದಿಗೆ ಗಾಯ

Prasthutha|

ಪುಣೆ: ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಬಳಿ ನಡೆದಿದೆ.

- Advertisement -

ಪುಣೆಯಿಂದ ಸುಮಾರು 240 ಕಿಮೀ ದೂರದಲ್ಲಿರುವ ಕೊಲ್ಹಾಪುರ ನಗರದ ಹೊರವಲಯದಲ್ಲಿರುವ ಪುಯಿಖಾಡಿ ಗ್ರಾಮದ ಬಳಿ ಇಂದು ಬೆಳಗಿನ ಜಾವ 2 ಗಂಟೆಗೆ ಈ ಅಪಘಾತ ಸಂಭವಿಸಿದೆ.
ಸುಮಾರು 25 ಪ್ರಯಾಣಿಕರನ್ನು ಹೊತ್ತ ಸ್ಲೀಪರ್ ಕೋಚ್ ಬಸ್ ಗೋವಾದಿಂದ ಮುಂಬೈಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.




Join Whatsapp