►ನಾಲ್ವರನ್ನು ಕೊಂದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದ ಹಂತಕ
ಉಡುಪಿ: ನೇಜಾರಿನಲ್ಲಿ ತಾಯಿ ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ತನಿಖೆ ಮುಂದುವರಿದಿದ್ದು, ಸಾಕಷ್ಟು ವಿಚಾರಗಳು ಈಗಾಗಲೇ ಬಹಿರಂಗವಾಗಿವೆ. ಐನಾಝ್ ತನ್ನ ನಿಯಂತ್ರಣದಲ್ಲಿರಬೇಕೆಂಬ ಪ್ರವೀಣ್ ಮನೋಭಾವ ಹತ್ಯೆಗೆ ಕಾರಣ ಎಂದು ಉಡುಪಿ ಎಸ್ಪಿ ಡಾ.ಅರುಣ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್ಪಿ ಡಾ.ಅರುಣ್, ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಐನಾಝ್ ಮತ್ತು ಅರೋಪಿ ಪ್ರವೀಣ್ ಗೆ ಎಂಟು ತಿಂಗಳಿಂದ ಪರಿಚಯ ಇತ್ತು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆಯಲ್ಲಿ ಗೆಳೆತನ ಇತ್ತು. ಆರೋಪಿ ಪ್ರವೀಣ್ ಐನಾಝ್ ಹಲವಾರು ಬಾರಿ ಸಹಾಯ ಮಾಡಿದ್ದನು ಎಂದು ತಿಳಿಸಿದ್ದಾರೆ.
ಅಲ್ಲದೆ, ಐನಾಝ್ ಪ್ರವೀಣ್ ಜೊತೆ ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಪಾಸೆಸಿವ್ ನೆಸ್ (ಅತೀಯಾದ ವ್ಯಾಮೋಹದಿಂದ ತನ್ನ ನಿಯಂತ್ರಣದಲ್ಲಿ ಇರಬೇಕೆಂದು) ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ. ಕೊಲೆ ಮಾಡುವ ದಿನ ಅವನು ಟೋಲ್ಗೇಟ್ ಬಳಿ ಕಾರು ಇಟ್ಟು ಬೇರೆ ಬೇರೆ ವಾಹನದಲ್ಲಿ ಡ್ರಾಪ್ ಪಡೆದುಕೊಂಡು ತೃಪ್ತಿನಗರಕ್ಕೆ ಹೋಗಿದ್ದಾನೆ.
ಹೀಗೆ ಐನಾಝ್ ಮನೆಗೆ ನುಗ್ಗಿದ ಪ್ರವೀಣ್, ಆರಂಭದಲ್ಲಿ ಚಾಕುವಿನಿಂದ ಇರಿದು ಐನಾಝ್ ಹತ್ಯೆ ಮಾಡಿ ಬಳಿಕ ಸಾಕ್ಷಿ ನಾಶಗೊಳಿಸಲು ಮನೆಯಲ್ಲಿದ್ದ ಹಸೀನಾ, ಅಫ್ನಾನ್, ಆಸಿಂ ಎಂಬವರನ್ನು ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ನಂತರ ಬೇರೆ ಬೇರೆ ವಾಹನದಲ್ಲಿ ಮಂಗಳೂರಿಗೆ ಪರಾರಿಯಾಗಿದ್ದಾನೆ.
ಕೈಗೆ ಗಾಯವಾಗಿರುವ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ನಾಲ್ವರನ್ನು ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದಾನೆ. ಪತ್ನಿಗೆ ಸಂಶಯ ಬರದ ಹಾಗೆ ಮನೆಯಲ್ಲಿ ಪ್ರವೀಣ್ ವರ್ತಿಸಿದ್ದನು ಎಂದರು.