ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ: ಇಬ್ಬರು ಪತ್ರಕರ್ತರ ಸಾವು

Prasthutha|

ಬೈರೂತ್: ದಕ್ಷಿಣ ಲೆಬನಾನ್‌(ಇಸ್ರೇಲ್ ಜತೆಗಿನ ಗಡಿಭಾಗದ ತಿರ್ ಹರ್ಫಾ ನಗರದ ಬಳಿ)ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ ಟಿವಿ ಚಾನೆಲ್‌ನ ಇಬ್ಬರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ಪ್ರಧಾನಿ ನಝೀಬ್ ಮಿಕಾತಿ ಹೇಳಿದ್ದಾರೆ.

- Advertisement -

ಫ್ಯಾಲೆಸ್ತೀನ್ ಪರ ನಿಲುವು ಹೊಂದಿದ್ದು, ಗಾಝಾದಲ್ಲಿ ಅಮಾಯಕರ ಸಾವು ನೋವಿಗೆ ಮರುಗುತ್ತಿದ್ದ ಅಲ್ ಮಯಾದೀನ್ ಟಿವಿಯ ಸಿಬ್ಬಂದಿಯನ್ನೇ ಗುರಿಯಾಗಿಸಿ ಇಸ್ರೇಲ್ ನಡೆಸಿದ ಉದ್ದೇಶಪೂರ್ವಕ ದಾಳಿ ಇದಾಗಿದೆ. ಇಬ್ಬರು ಪತ್ರಕರ್ತರು ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಇದು ಮಾಧ್ಯಮದ ಧ್ವನಿ ಹತ್ತಿಕ್ಕಲು ಇಸ್ರೇಲ್ ನಡೆಸುವ ಪ್ರಯತ್ನದ ಮುಂದುವರಿದ ಭಾಗವಾಗಿದೆ ಎಂದೂ ನಝೀಬ್ ಮಿಕಾತಿ ಹೇಳಿದ್ದಾರೆ.




Join Whatsapp