ಸುಳ್ಳು ಅತಿಯಾಯಿತು, ಹುಶಾರ್: ಪತಂಜಲಿಗೆ ಸುಪ್ರೀಂ ಚಾಟಿಯೇಟು

Prasthutha|

ನವದೆಹಲಿ: ಬಾಬಾ ರಾಮ್ ದೇವ್‌ರವರ ಪತಂಜಲಿಯು ಅಲೋಪತಿಯಂತಹ ಆಧುನಿಕ ಚಿಕಿತ್ಸಾ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆಯುವ ಹೇಳಿಕೆಗಳು ಮತ್ತು ಜಾಹೀರಾತುಗಳು ನೀಡುತ್ತಿದ್ದು, ಇದನ್ನು ಸರ್ವೋಚ್ಛ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ. ಪತಂಜಲಿ ಆರ್ಯುವೇದದ ಎಲ್ಲಾ ತಪ್ಪು ದಾರಿಗೆಳೆಯುವ ಮತ್ತು ಸುಳ್ಳು ಜಾಹೀರಾತುಗಳು ತಕ್ಷಣವೇ ನಿಲ್ಲಬೇಕು. ಯಾವುದೇ ರೀತಿಯ ಉಲ್ಲಂಘನೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ನಿರ್ದಿಷ್ಟ ರೋಗಗಳನ್ನು ಗುಣಪಡಿಸಲಾಗುತ್ತದೆ ಎಂದು ಹೇಳಿಕೊಳ್ಳುವ ಪ್ರತಿಯೊಂದು ನಿಮ್ಮ ಔಷಧದ ಮೇಲೆ ಒಂದೊಂದು ಕೋಟಿ ರೂಪಾಯಿವರೆಗೂ ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಅಶಾದುದ್ದೀನ್‌ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಪಂಕಜ್‌ ಮಿಶ್ರಾ ಅವರ ಪೀಠ ಪತಂಜಲಿ ಆರ್ಯುವೇದ ಕಂಪನಿಗೆ ಕಟು ಎಚ್ಚರಿಕೆ ನೀಡಿದೆ.

- Advertisement -

ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮ್‌ದೇವ್ ಅವರ ಸ್ಮೀಯರ್ ಅಭಿಯಾನವನ್ನು ಆರೋಪಿಸಿ ಐಎಂಎ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, ಆಗಸ್ಟ್ 23, 2022 ರಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದರ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಪತಂಜಲಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.

ಬಾಬಾ ರಾಮ್‌ದೇವ್‌ ಅವರಿಗೆ ಏನಾಗಿದೆ..? ಅವರು ತಮ್ಮ ಉದ್ಯಮವನ್ನು ಜನಪ್ರಿಯಗೊಳಿಸಬಹುದು, ಆದರೆ ಅವರು ಬೇರೆ ಪದ್ಧತಿಯನ್ನು ಯಾಕೆ ಟೀಕಿಸುತ್ತಿದ್ದಾರೆ.ಅವುಗಳ ಬಗ್ಗೆ ಯಾಕೆ ಸುಳ್ಳುಗಳನ್ನು ಹೇಳುತ್ತಿದ್ದಾರೆ? ನಾವು ಅವರನ್ನು ಗೌರವಿಸ್ತೀವಿ, ಅವರು ಯೋಗವನ್ನು ಜನಪ್ರಿಯಗೊಳಿಸಿದ್ದಾರೆ, ಆದರೆ ಅವರು ಬೇರೆ ಪದ್ಧತಿಯನ್ನು ಟೀಕಿಸುವಂತಿಲ್ಲ. ಸುಳ್ಳು ಪ್ರಚಾರ ಮಾಡುವಂತಿಲ್ಲ. ತಮ್ಮದೇ ಪದ್ಧತಿ ಎಲ್ಲ ರೋಗಕ್ಕೂ ಎನ್ನುವುದಕ್ಕೆ ಏನು ಗ್ಯಾರಂಟಿ ಕೊಡುತ್ತಾರೆ..? ಅವರು ವೈದ್ಯ ಪದ್ಧತಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಬೇರೆ ಪದ್ಧತಿಯನ್ನು ಟೀಕಿಸುವುದನ್ನು ಅವರು ನಿಲ್ಲಿಸಬೇಕು ಎಂದು ಸಿಜೆಐ ಆಗಿದ್ದ ಎನ್‌ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




Join Whatsapp