ಉ.ಪ್ರದೇಶ: ಜಾಮೀನಿನಲ್ಲಿ ಹೊರಬಂದು ಸಂತ್ರಸ್ತೆಯನ್ನು ಕೊಚ್ಚಿ ಕೊಂದ ಅತ್ಯಾಚಾರಿ!

Prasthutha|

ಲಖನೌ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದ್ದ ದುಷ್ಕರ್ಮಿಗೆ ನ್ಯಾಯಾಲಯಯ ಜಾಮೀನು ನೀಡಿತ್ತು. ಹೊರ ಬಂದವನು ಇದೀಗ ಪ್ರಾಪ್ತ ವಯಸ್ಸಿಗೆ ಬಂದು ಬದುಕಿಗೆ ಹೊಂದಾಣಿಕೆಯಾಗುತ್ತಿದ್ದ ಯುವತಿಯನ್ನು ಕೊಚ್ಚಿ ಕೊಂದಿದ್ದಾನೆ. ಈ ಕೊಲೆಗೆ ಕೊಲೆ ಕೇಸಿನಲ್ಲಿ ಜೈಲು ಸೇರಿ ಜಾಮೀನಿನ‌ ಮೇಲೆ ಹೊರಬಂದಿದ್ದ ಹೋದರನನ್ನು ಜೊತೆ ಸೇರಿಸಿದ್ದಾನೆ. ಆತನೊಂದಿಗೆ ಸೇರಿ 19 ವರ್ಷದ ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಕೊಚ್ಚಿ ಹಾಕಿದ್ದಾನೆ. ಯುವತಿ ಅತ್ಯಂತ ಯಾತನಾಮಯವಾಗಿ ಸಾವು ಕಂಡಿದ್ದಾಳೆ.

- Advertisement -

ಸಂತ್ರಸ್ತ ಯುವತಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಈ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬ್ರಿಜೇಶ್​ ಶ್ರೀವಾಸ್ತವ, ಮೃತ ಯುವತಿ ಹಾಗೂ ಆರೋಪಿಗಳಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರು. ಅತ್ಯಾಚಾರ ಸಂತ್ರಸ್ತ ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಕೊಚ್ಚಿ ಹಾಕಲಾಗಿದ್ದು, ಯುವತಿ ತುಂಬಾ ಯಾತನೆಪಟ್ಟು ಮೃತರಾಗಿದ್ದಾರೆ. ಯುವತಿಯನ್ನು ಕೊಂದ ಬಳಿಕ ಕ್ರಿಮಿನಲ್ ಹಿನ್ನೆಲೆಯ ಸಹೋದರರಾದ ಪವನ್ ನಿಶಾದ್ ಮತ್ತು ಅಶೋಕ್ ನಿಶಾದ್ ಎಸ್ಕೇಪ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.‌

- Advertisement -

ಮೂರು ವರ್ಷಗಳ ಹಿಂದೆ ಪವನ್ ನಿಶಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಇನ್ನೂ ಪ್ರಾಪ್ತ ವಯಸ್ಸಿಗೆ ಬಾರದ ಬಾಲಕಿ ದೂರು ನೀಡಿದ್ದಳು. ಬಳಿಕ ಪವನ್ ನಿಶಾದ್ ಹಾಗೂ ಆತನ ಸಹಚರರು ಬಾಲಕಿಯ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರು, ಜತೆಗೆ ದೂರನ್ನು ಹಿಂಪಡೆಯುವಂತೆಯೂ ಕೇಳಿದ್ದರು, ಆದರೆ ಬಾಲಕಿ ಪೋಷಕರು ಅದಕ್ಕೆ ಒಪ್ಪಿರಲಿಲ್ಲ.

ಪವನ್ ಸಹೋದರ ಅಶೋಕ್ ನಿಶಾದ್ ಕೂಡ ಕೊಲೆ ಪ್ರಕರಣದ ಆರೋಪಿ. ಇಬ್ಬರಿಗೂ ನ್ಯಾಯಾಲಯ ಜಾಮೀನು ನೀಡಿತ್ತು. ಪವನ್ ಸಹೋದರ 2 ದಿನದ ಹಿಂದಷ್ಟೇ ಜಾಮೀನಿನ‌ ಮೇಲೆ ಜೈಲಿಂದ ಹೊರಬಂದಿದ್ದ. ಈಗ ಪ್ರಾಪ್ತ ವಯಸ್ಸಿಗೆ ಬಂದ ಸಂತ್ರಸ್ತೆಯ ಕುಟುಂಬದವರ ಬಳಿ ಹೋಗಿ ಪ್ರಕರಣ ಮುಚ್ಚಿ ಹಿಂಪಡೆಯುವಂತೆ ಸಹೋದರರು ಒತ್ತಾಯಿಸುತ್ತಿದ್ದರು. ಆದರೆ, ಯುವತಿ ಹಿಂದೆ ಸರಿಯದ ಕಾರಣ ಹೊಲದಲ್ಲಿ ದನ ಮೇಯಿಸಿ ಹಿಂದಿರುಗುತ್ತಿದ್ದ ವೇಳೆ ಸಹೋದರರುರಿಬ್ಬರು ಹೊಂಚು ಹಾಕಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬ್ರಿಜೇಶ್​ ಶ್ರೀವಾಸ್ತವ ತಿಳಿಸಿದ್ದಾರೆ.

ದುಷ್ಕರ್ಮಿಯ ಕಾಮತೃಷೆಗಾಗಿ ಅಪಾರ ಅನುಭವಿಸಿದ ಯುವತಿ ಮತ್ತು ಮನೆಯವರಿಗೆ ನ್ಯಾಯ ಕೊಡುವುದರ ಬದಲಿಗೆ ಕ್ರಿಮಿನಲ್ ಹಿನ್ನೆಲೆಯ ಸಹೋದರರಿಗೆ ಬಿಡುಗಡೆ ಭಾಗ್ಯ ನೀಡಿ ಅವರು ಸಂತ್ರಸ್ತೆಗೆ ಅತ್ಯಂತ ಯಾತನಾಮಯವಾಗಿ ಸಾಯುವ ಶಿಕ್ಷೆಯನ್ನೂ ನೀಡಲು ನ್ಯಾಯಾಲಯ ಪರೋಕ್ಷ ಸಹಕರಿಸಿದಂತಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.




Join Whatsapp