ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಕಾಂಗ್ರೆಸ್ಗೆ ಸೇರಲು ಆಸಕ್ತಿ ತೋರಿದರೆ ನಾವು ಖಂಡಿತವಾಗಿಯೂ ಬರಮಾಡಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಡಿಕೆಶಿ-ಜಿಟಿ ದೇವೇಗೌಡ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ಆಸಕ್ತಿ ತೋರಿಸಿದ್ರೆ ನಾವು ಕರೆಯುತ್ತೇವೆ. ಸೌಜನ್ಯದ ಭೇಟಿ ವೇಳೆ ಮಾತನಾಡಿರುತ್ತೇವೆ. ಅಲ್ಲಿ ಏನು ಮಾತನಾಡಿರ್ತೇವೆ ಅಂತ ನಿಮಗೆ ಗೊತ್ತಿರಲ್ಲ. ಸೋಮಣ್ಣ ಕಾರ್ಯಕ್ರಮಕ್ಕೆ ಕರೆಯಲು ಬಂದಿದ್ರು. ಇದನ್ನೇ ಪಕ್ಷ ಸೇರಲು ಮಾತುಕತೆಗೆ ಬಂದಿದ್ದಾರೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.