ಇಟಲಿಯ ನೂತನ ಪ್ರಧಾನಿಯಾಗಿ ಮಾರಿಯೊ ಡ್ರಾಘಿ ಪ್ರಮಾಣ ವಚನ ಸ್ವೀಕಾರ

Prasthutha|

ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಮಾಜಿ ಮುಖ್ಯಸ್ಥ ಮಾರಿಯೋ ಡ್ರಾಘಿ ಇಟಲಿಯ ಮುಂದಿನ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ತಿಂಗಳು ಹಿಂದಿನ ಸರಕಾರ ಪತನಗೊಂಡ ನಂತರ ಡ್ರಾಘಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಗ್ಗಟ್ಟನ್ನು ಮೂಡಿಸುವ ಕಾರ್ಯ ಡ್ರಾಘಿ ಮಾಡಿದ್ದಾರೆ.

- Advertisement -

ಸಂಸತ್ತಿನ ಅತಿದೊಡ್ಡ ಗುಂಪು ಫೈವ್ ಸ್ಟಾರ್ ಮೂವ್ ಮೆಂಟಿನ ಬೆಂಬಲದೊಂದಿಗೆ ಡ್ರಾಘಿ ಅಧಿಕಾರ ಸ್ವೀಕರಿಸಿದ್ದಾರೆ.

ಯುರೋಪಿಯನ್ ಒಕ್ಕೂಟದ ಉನ್ನತ ಮಟ್ಟದಲ್ಲಿ ಅನುಭವ ಹೊಂದಿರುವ ಅರ್ಥಶಾಸ್ತ್ರಜ್ಞ ಮತ್ತು ಬ್ಯಾಂಕ್ ಆಫ್ ಇಟಲಿಯ ಗವರ್ನರ್ ಆಗಿದ್ದ ಡ್ರಾಘಿಯ ಕುರಿತು “ಮಾರಿಯೋ ಡ್ರಾಘಿ ಯುರೋಪ್ ಅನ್ನು ಉಳಿಸಿದ ಇಟಾಲಿಯನ್, ಮತ್ತು ಈಗ ಅವರು ಇಟಲಿಯನ್ನು ಉಳಿಸಬಲ್ಲ ಯುರೋಪಿಯನ್ ಎಂದು ನಾನು ಭಾವಿಸುತ್ತೇನೆ” ಎಂದು ಮಾಜಿ ಪ್ರಧಾನಿ ಮ್ಯಾಟಿಯೊ ರೆನ್ಜಿ ಕಳೆದ ವಾರ ಬಿಬಿಸಿಯ ನ್ಯೂಶೋರ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

- Advertisement -

ಹಣವನ್ನು ಖರ್ಚು ಮಾಡುವ ಯೋಜನೆಗಳ ಬಗ್ಗೆ ತನ್ನ ಪಕ್ಷವು ತನ್ನ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲವನ್ನು ಕಳೆದುಕೊಂಡ ನಂತರ ಹಿಂದಿನ ಪ್ರಧಾನಿ ಗೈಸೆಪೆ ಕಾಂಟೆ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು.



Join Whatsapp