ಬೆಂಗಳೂರು : ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ಶಿಫಾರಸು ಮಾಡುತ್ತಿರಲಿಲ್ಲವೇ? ಯತೀಂದ್ರ ಒಬ್ಬ ಮಾಜಿ ಶಾಸಕನಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಆರೋಪ ಮಾಡುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಗಮನವನ್ನು ತಮ್ಮ ಶಾಸಕರ ಕಡೆ ಕೊಡಲಿ. ಕಡೇ ಪಕ್ಷ ಅವರ ಶಾಸಕರಾದರೂ ಜೆಡಿಎಸ್ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ವಿಪಕ್ಷ ನಾಯಕರಾಗಿ ಆರ್ ಅಶೋಕ್ ನೇಮಕ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಆರು ತಿಂಗಳ ಬಳಿಕ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದಾರೆ. ವರ್ಗಾವಣೆ ಅಂಗಡಿ ತೆಗೆದಿದ್ದಾರೆ ಎನ್ನುವುದನ್ನು ನಾವು ಚರ್ಚೆ ಮಾಡುತ್ತೇವೆ. ವಿಪಕ್ಷ ನಾಯಕ ಆಯ್ಕೆಯಿಂದ ಕಾಂಗ್ರೆಸ್ ಗೆ ಖುಷಿಯಾಗಿದೆ. ಬಿಜೆಪಿಯವರಿಗೆ ಖುಷಿಯಾಗಿಲ್ಲ. ಏಕೆಂದರೆ ಬಿಜೆಪಿ ವರ್ಸಸ್ ಬಿಜೆಪಿ ಇನ್ನೂ ಮುಗಿದಿಲ್ಲ. ಪಾರ್ಟ್ 1 ಬಿ.ಎಲ್. ಸಂತೋಷ ಅವರದ್ದು, ಪಾರ್ಟ್ 2 ಇವರದ್ದು ಎಂದರು.