ಬಿ.ಆರ್. ಶೆಟ್ಟಿ, ಎನ್ ಎಂಸಿ ಮಾಜಿ ಎಕ್ಸಿಕ್ಯೂಟಿವ್ ಗಳ ಆಸ್ತಿ ಮುಟ್ಟುಗೋಲು ಹಾಕಲು ಯುಕೆ ಕೋರ್ಟ್ ಆದೇಶ

Prasthutha|

ಲಂಡನ್ : ಖ್ಯಾತ ಉದ್ಯಮಿ, ಎನ್ ಎಂಸಿ ಹೆಲ್ತ್ ನ ಸಂಸ್ಥಾಪಕ ಬಿ.ಆರ್. ಶೆಟ್ಟಿ, ಮಾಜಿ ಸಿಇಒ ಪ್ರಶಾಂತ್ ಮಂಗತ್ ಮತ್ತು ಸಂಸ್ಥೆಯ ಇತರ ಮಾಜಿ ಪ್ರಮುಖರ ಜಗತ್ತಿನಾದ್ಯಂತದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಯುಕೆ ನ್ಯಾಯಾಲಯವೊಂದು ಆದೇಶಿಸಿದೆ. ಅಬು ಧಾಬಿ ಕಮರ್ಶಿಯಲ್ ಬ್ಯಾಂಕ್ ಮನವಿ ಮೇರೆಗೆ ಈ ಆದೇಶ ನೀಡಲಾಗಿದೆ.

- Advertisement -

ಅಬುಧಾಬಿ ಕೇಂದ್ರ ಸ್ಥಾನವಾಗಿರುವ ಈ ಆರೋಗ್ಯ ಸೇವಾ ಸಂಸ್ಥೆ ಕಳೆದ ವರ್ಷ ಭಾರೀ ಅಕ್ರಮ ಹಣಕಾಸು ವ್ಯವಹಾರ ಕಂಡುಬಂದ ಬಳಿಕ ಕುಸಿದುಹೋಗಿತ್ತು. ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ಎನ್ ಎಂಸಿ ಹೆಲ್ತ್ ವಿರುದ್ಧ ಅತಿಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಇತರ ಹಲವು ವಿದೇಶಿ ಮತ್ತು ಸ್ಥಳೀಯ ಬ್ಯಾಂಕ್ ಗಳೂ ಈ ಆರೋಗ್ಯ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿವೆ.

ಸಂಸ್ಥೆಯ ಒಟ್ಟು ಆರು ಮಂದಿ ಮಾಜಿ ಅಧಿಕಾರಿಗಳು, ನಿರ್ವಾಹಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹೈಕೋರ್ಟ್ ಆದೇಶಿಸಿದೆ.



Join Whatsapp