ಉತ್ತರಾಖಂಡ ಸುರಂಗ ಕುಸಿತ: 4ನೇ ದಿನದಲ್ಲೂ ಮುಗಿಯದ ರಕ್ಷಣಾ ಕಾರ್ಯಾಚರಣೆ

Prasthutha|

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು 40 ಕಾರ್ಮಿಕರು ಸಿಲುಕಿದ್ದು, ರಕ್ಷಣಾ ಕಾರ್ಯ ನಾಲ್ಕು ದಿನದಿಂದ ನಡೆಯುತ್ತಿದ್ದರೂ ಪೂರ್ಣವಾಗಿಲ್ಲ.

- Advertisement -

ಇದರ ಮಧ್ಯೆ ಸುರಂಗದಲ್ಲಿ ಭೂಕುಸಿತ ಸಹ ಸಂಭವಿಸಿದ್ದು, ಕಾರ್ಮಿಕರನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ಅಡೆತಡೆಗಳು ಉಂಟಾಗುತ್ತಿವೆ.

ಹಾಳಾದ ಹಳೆಯ ತಂತ್ರಜ್ಞಾನ ಆಗರ್ ಯಂತ್ರದ ಜಾಗದಲ್ಲಿ ಈಗ ದೆಹಲಿಯಿಂದ ಅತ್ಯಾಧುನಿಕ ಡ್ರಿಲ್ ಮಷಿನ್ ತರಲಾಗುತ್ತಿದ್ದು, ವಾಯುಪಡೆಯ ಸಹಾಯದಿಂದ ಅದನ್ನು ಸುರಂಗ ಸ್ಥಳಕ್ಕೆ ಸಾಗಿಸಲಾಗುತ್ತಿದೆ.

- Advertisement -

ಗಮನಾರ್ಹ ಸಂಗತಿ ಏನೆಂದರೆ, ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರ ಸ್ಥಿತಿ ಈಗ ಹದಗೆಡಲು ಪ್ರಾರಂಭಿಸಿದೆ. ಜ್ವರ, ಮೈಕೈ ನೋವು ಮತ್ತು ನರಗಳ ಸಮಸ್ಯೆಯಾಗುತ್ತಿವೆ. ಪೈಪ್ಗಳ ಮೂಲಕ ಔಷಧಿಗಳನ್ನು ಕಳುಹಿಸಲಾಗುತ್ತಿದೆ.



Join Whatsapp