ಷಾಕಿಂಗ್ ವರದಿ: ಭಾರತದಲ್ಲಿ ಶೇ.70 ನಿಷೇಧಿತ ಆಯಂಟಿಬಯೋಟಿಕ್ ಔಷಧಿ ಮಾರಾಟ!

Prasthutha|

- Advertisement -

ನವದೆಹಲಿ: ಭಾರತೀಯರಿಗೆ ಷಾಕಿಂಗ್ ಆಗುವಂತಹ ಅಧ್ಯಯನಾ ವರದಿಯೊಂದು ಹೊರಬಂದಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಶೇಕಡ 70 ರಷ್ಟು ಆಯಂಟಿಬಯೋಟಿಕ್ ಔಷಧಿಗಳು ನಿಷೇಧಿತ ಅಥವಾ ಅನುಮತಿಯೇ ಪಡೆಯದ ಔಷಧಿ ಅನ್ನೋ ಸ್ಫೋಟಕ ಮಾಹಿತಿಯನ್ನು ಅದು ನೀಡಿದೆ.

2020ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಶೇಕಡಾ 70 ರಷ್ಟು ಆಯಂಟಿಬಯೋಟಿಕ್ ಡೋಸ್ ನಿಷೇಧಿತ ಔಷಧಿಗಳು ಎಂದು ಭಾರತ, ಖತಾರ್ ಹಾಗೂ ಲಂಡನ್ ಸಂಶೋಧಕರು ಜಂಟಿಯಾಗಿ ನಡೆಸಿದ FDC ನಿಯಂತ್ರಕ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಸ್ಫೋಟಕ ಮಾಹಿತಿಯ ಲೇಖನವನ್ನು ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಪಾಲಿಸಿ ಮತ್ತು ಪ್ರಾಕ್ಟೀಸ್‌ನಲ್ಲಿ ಪ್ರಕಟಿಸಲಾಗಿದೆ.

- Advertisement -

ಅಂದರೆ, ನಿಷೇಧಿತ, ಅನುಮತಿ ಪಡೆಯದ ಆಯಂಟಿ ಬಯೋಟಿಕ್ ಔಷಧಿಗಳು ನೇರವಾಗಿ ಜನರ ದೇಹ ಸೇರುತ್ತಿದೆ. ಈ ಐಷಧಿಗಳು ಪರಿಣಾಮಕಾರಿಯಲ್ಲ ಮಾತ್ರವಲ, ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು ಅನ್ನೋ ಮಾಹಿತಿಯನ್ನೂ ಅಧ್ಯಯನ ತಿಳಿಸಿದೆ. ಭಾರತದ ಡ್ರಗ್ಸ್ ಕಂಟ್ರೋಲ್ ಘಟಕ ಇದರ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದೆ. ಆದರೆ ಈ ನಿಷೇಧಿತ ಔಷಧಿಗಳ ಹಾವಳಿ ನಿಂತಿಲ್ಲ ಎಂದು ಲೇಖನದಲ್ಲಿ ಸಂಶೋಧಕರು ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಅತೀ ಹೆಚ್ಚಿನ ನಿಷೇಧಿತ, ಅನುಮೋದನೆ ಸಿಗದ ಔಷಧಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿದೆ. ಈ ಕುರಿತು ಕಠಿಣ ಕ್ರಮದ ಜೊತೆಗೆ ಜಾಗೃತಿಯ ಅವಶ್ಯಕತೆ ಇದೆ ಎಂದು ಸಂಶೋದನಾ ಲೇಖನದಲ್ಲಿ ಉಲ್ಲೇಖಿಸಲಾಗಿದೆ.



Join Whatsapp