ಚಿಕ್ಕಮಗಳೂರು: ಪಟಾಕಿ ಸಿಡಿದು ಓರ್ವ ಯುವಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.
ಪ್ರದೀಪ್(30) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಮೂವರು ಮಕ್ಕಳಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಪ್ರದೀಪ್, ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ವೇಳೆ ಪಟಾಕಿ ಸಿಡಿದಿದ್ದು ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.