ಬೆಂಗಳೂರು: ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ (HSRP) ಅಳವಡಿಕೆಗೆ ಸರ್ಕಾರವು ಮತ್ತಷ್ಟು ಅವಧಿ ನೀಡಿದೆ. ಮುಂದಿನ ವರ್ಷ ಫೆಬ್ರವರಿ 17ರವರೆಗೆ ಅವಧಿ ವಿಸ್ತರಿಸಿ ಮಾಡಿ ಆದೇಶ ಹೊರಡಿಸಿದೆ.
2019ರ ಏಪ್ರಿಲ್ ತಿಂಗಳಿಗಿಂತಲೂ ಮೊದಲು ನೋಂದಾಯಿಸಲಾಗಿರುವ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 17ರ ಗಡುವು ನೀಡಲಾಗಿತ್ತು. ಆದರೀಗ HSRP ನಂಬರ್ ಪ್ಲೇಟ್ ಅಳವಡಿಸಲು ಮುಂದಿನ ವರ್ಷ ಫೆಬ್ರವರಿ 17ರವರೆಗೂ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.
HSRP ನಂಬರ್ ಪ್ಲೇಟ್‌ನಲ್ಲಿ ವಾಹನದ ಎಂಜಿನ್ ಸಂಖ್ಯೆ, ಚಸ್ಸಿ ಸಂಖ್ಯೆ ಸೇರಿ ಹಲವು ಮಾಹಿತಿ ಅಡಕ ಮಾಡಲಾಗಿರುತ್ತದೆ. ಈ ಎಲ್ಲ ಮಾಹಿತಿಗಳು ಕೇಂದ್ರ ಸರಕಾರ ಡೇಟಾ ಬೇಸ್‌ನಲ್ಲಿ ಸಂಗ್ರಹವಾಗುತ್ತವೆ. ವಾಹನ ಕಳ್ಳತನವಾದರೆ ಈ ಮಾಹಿತಿ ಬಳಸಿಕೊಂಡು ಬೇಗ ವಾಹನ ಹುಡುಕಬಹುದಾಗಿದೆ. ಇದಲ್ಲದೆ ಈ ನಂಬರ್ ಪ್ಲೇಟ್ ಬದಲಾವಣೆ ಅಥವಾ ಮಾರ್ಫಿಂಗ್ ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು. ನಂಬರ್ ಪ್ಲೇಟ್‌ನಲ್ಲಿರುವ ಮಾಹಿತಿ ತಿದ್ದುವುದಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ.