ವಿದಿಶಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪಕ್ಷದ ಶಾಸಕರನ್ನು “ಖರೀದಿ” ಮಾಡಿದ್ದು, ಮಧ್ಯಪ್ರದೇಶದಲ್ಲಿ ಸರ್ಕಾರವನ್ನು “ಕದಿಯುತ್ತಿದ್ದಾರೆ” ಎಂದು ಕಾಂಗ್ರೆಸ್ ಹಿರಿಯ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
2020 ರಲ್ಲಿ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣವಾದ 22 ಶಾಸಕರ ಬಂಡಾಯವನ್ನು ಉಲ್ಲೇಖಿಸಿದ ರಾಹುಲ್ಸ ಜನಸಾಮಾನ್ಯರ ಧ್ವನಿಯನ್ನು ಬಿಜೆಪಿ “ನುಚ್ಚುನೂರು” ಮಾಡಿದೆ ಎಂದಿದ್ದಾರೆ.
ಕೋಟ್ಯಂತರ ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನಿಮ್ಮ ನಿರ್ಧಾರ, ನಿಮ್ಮ ಹೃದಯದ ಧ್ವನಿಯನ್ನು ಬಿಜೆಪಿ ನಾಯಕರು, ಪ್ರಧಾನಿ ಪುಡಿ ಮಾಡಿದ್ದಾರೆ. ನೀವು ಮೋಸ ಹೋಗಿದ್ದೀರಿ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹೊರಹಾಕುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.