ಚಿಕ್ಕಮಗಳೂರು: ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ ಎಂದು ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಮಾತನಾಡಿರುವ ಸಿ.ಟಿ ರವಿ, ನನ್ನ ಮತ್ತು ಪಕ್ಷದ ವಿಚಾರ, ಸಿದ್ದಾಂತ ಹಿಂದುತ್ವ. ನೀವು ಸಂದರ್ಭಕ್ಕೆ ಯಾವ ರೀತಿ ವ್ಯಾಖ್ಯಾನ ಮಾಡುತ್ತೀರಾ ಅದಕ್ಕೆ ಸ್ವತಂತ್ರ ಇದ್ದೀರಿ. ಹಿಂದುತ್ವದ ಕಾರಣಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಇದನ್ನು ನಾನು ಬಹಳ ಸಲ ಹೇಳಿದ್ದೇನೆ. ಸಿದ್ಧಾಂತಕಾಗಿನೇ ಹೋರಾಟ ಮಾಡಿದ್ದೇವೆ. ಸಿದ್ಧಾಂತದ ನಂಬಿಕೆ ಕಾರಣಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ. ಆ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.