ಬೆಂಗಳೂರು: ಜೆಡಿಎಸ್ ನಿಲುವನ್ನು ವಿರೋಧಿಸಿ ಪಕ್ಷದಿಂದ ಹೊರಬಂದ ಒಕ್ಕಲಿಗ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುತ್ತಾ ಬಂದವರು, ನನ್ನನ್ನು ಸೋಲಿಸಲು ಆಗಲಿಲ್ಲ ಎಂಬ ಹತಾಶೆಯಿಂದ ಸುಖಾಸುಮ್ಮನೆ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅವರು ಈ ಕೆಲಸ ಮುಂದುವರಿಸಿದರೆ ನಾನೂ ನನ್ನ ವರಸೆ ತೋರಿಸಬೇಕಾಗುತ್ತದೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ನನ್ನ ಹೆಸರು ಹೇಳದೆ, ಅರಸೀಕೆರೆಯವನು ಅಂತಾರೆ, ನಾನೂ ಅವರನ್ನು ಚನ್ನಪಟ್ಟಣ ಶಾಸಕ ಅನ್ನಬಹುದು, ಆದರೆ ನಾನು ಹಾಗೆ ಮಾತನಾಡುವುದಿಲ್ಲ ಎಂದರು.