ಸಾಮ್ರಾಜ್ಯಶಾಹಿ – ಝಿಯೋನಿಷ್ಟ್ – ಫಾಸಿಸ್ಟ್ ಆಕ್ರಮಣಗಳಿಗೆದುರಾಗಿ ಹೊಸಂಗಡಿ ಪಟ್ಟಣದಲ್ಲಿ ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ

Prasthutha|

ಮಂಜೇಶ್ವರ : ಫಾಲೆಸ್ತೀನ್ ಸಾಮೂಹಿಕ ನರಮೇಧದ ಷಡ್ಯಂತ್ರದಲ್ಲಿ  ಪ್ರಮುಖ ಪಾತ್ರವಹಿಸಿದ ಅಮೇರಿಕದ ಸ್ಟೇಟ್ ಕಾರ್ಯದರ್ಶಿ “ಆಂಟನಿ  ಬ್ಲಿಂಕನ್ ಗೋ ಬಾಕ್”.

- Advertisement -

 ಸಾಮ್ರಾಜ್ಯಶಾಹಿ – ಝಿಯೋನಿಷ್ಟ್ – ಫಾಸಿಸ್ಟ್ ಆಕ್ರಮಣಗಳಿಗೆದುರಾಗಿ  ಎಸ್.ಡಿ.ಪಿ.ಐ ರಾಜ್ಯ ವ್ಯಾಪಕವಾಗಿ ಇನ್ನೂರು ಕೇಂದ್ರಗಳಲ್ಲಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಯ ಭಾಗವಾಗಿ ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಸಮಿತಿ ಹೊಸಂಗಡಿ ಪೇಟೆಯಲ್ಲಿ ಪ್ರತಿಭಟನೆಯನ್ನು ನಡೆಸಿತು.

 ಮಂಜೇಶ್ವರ ಬ್ಲಾಕ್ ಪಂಚಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಪ್ರತಿಭಟನೆಯನ್ನು ಉದ್ಘಾಟಿಸಿದರು. ಮಂಡಲ ಕೋಶಾಧಿಕಾರಿ ತಾಜು ಉಪ್ಪಳ, ಮೀಂಜ ಗ್ರಾಮ ಪಂಚಾಯತ್ ಸದಸ್ಯ ರಝ್ಝಾಕ್ ಗಾಂಧಿನಗರ, ಕುಂಬಳೆ ಗ್ರಾಮ‌ ಪಂಚಾಯತ್ ಸದಸ್ಯ ಅನ್ವರ್ ಆರಿಕ್ಕಾಡಿ ಮೊದಲಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಎಸ್.ಡಿ.ಪಿ.ಐ ಕುಂಬಳೆ ಪಂಚಾಯತ್ ಅಧ್ಯಕ್ಷ ನಾಸರ್ ಬಂಬ್ರಾಣ ಸ್ವಾಗತ ಹಾಗೂ ಮಂಡಲ ಸಮಿತಿ ಸದಸ್ಯ ಆರಿಫ್ ಖಾದರ್ ವಂದನೆಯನ್ನು ಸಲ್ಲಿಸಿದರು.



Join Whatsapp