ಶಿವಮೊಗ್ಗ | ಯುವಕರ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ

Prasthutha|

ಶಿವಮೊಗ್ಗ: ಎರಡು ಗ್ಯಾಂಗ್ ಗಳ ಗಲಾಟೆ ನಡೆದು ಮೂವರಿಗೆ ಚಾಕು ಇರಿದಿರುವ ಘಟನೆ ಜೆಪಿ ನಗರ ಬಳಿ ರಾತ್ರಿ ನಡೆದಿದೆ.

- Advertisement -


ಟಿಪ್ಪುನಗರದ ಸಮೀರ್ (23), ಫರಾಜ್(24), ಜೆ.ಪಿ.ನಗರದ ಮೊಹಮದ್ ಖಾಲಿದ್ ಅಲಿಯಾಸ್ ಸೋನು (19) ಚಾಕು ಇರಿತದಿಂದ ಗಾಯಗೊಂಡವರು.


ಯುವಕರು ಗುರುವಾರ ಜೆಪಿನಗರದ ಜಂಡೆಕಟ್ಟೆ ಬಳಿ ಗ್ಯಾರವಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪರಸ್ಪರ ಗುರಾಯಿಸಿಕೊಂಡು, ಮತ್ತೆ ಮಾರಕಾಸ್ತ್ರದಿಂದ ಬಡಿದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ಐಪಿಸಿ 323, 324, 307, 504, 341 r/w 149 IPC ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.



Join Whatsapp