ಹಿಂದೂಗಳ ನಿಂದನೆ ಆರೋಪ: ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮೊಲ್ಲಾ ಅರೆಸ್ಟ್

Prasthutha|

ಗುವಾಹಟಿ: ಹಿಂದೂ ಸಮುದಾಯ ಮತ್ತು ಪುರೋಹಿತರ ವಿರುದ್ಧ ಹೇಳಿಕೆ ನೀಡಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ್ ಉದ್ದೀನ್ ಮೊಲ್ಲಾ ಅರೆಸ್ಟ್ ಆಗಿದ್ದಾರೆ. ಗುವಾಹಟಿಯ ಶಾಸಕ ವಾಝೆದ್ ಅಲಿ ಚೌಧರಿ ಅವರ ಮನೆಯಿಂದ ಮೊಲ್ಲಾ ಅವರನ್ನು ಬಂಧಿಸಲಾಗಿದೆ.

- Advertisement -

ನವೆಂಬರ್ 4 ರಂದು ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಈ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ನವೆಂಬರ್ 5 ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯು ಮೊಲ್ಲಾ ಅವರ ಹೇಳಿಕೆಗೆ ಶೋಕಾಸ್ ನೋಟಿಸ್ ನೀಡಿತ್ತು.

ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಸೆಕ್ಷನ್ 295 (ಎ) / 153 ಎ (1) (ಬಿ) / 505 (2) ಅಡಿಯಲ್ಲಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಮೊಲ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮಾಧ್ಯಮಗಳು ವರದಿ ಮಾಡಿವೆ.



Join Whatsapp