ಮುರುಘಾ ಶ್ರೀಗೆ ಪೋಕ್ಸೋ ಪ್ರಕರಣದಲ್ಲಿ ಜಾಮೀನು: ಆದರೂ ಸದ್ಯಕ್ಕೆ ಜೈಲೇ ಗತಿ!

Prasthutha|

ಬೆಂಗಳೂರು: ಖಾವಿ ತೊಟ್ಟು ಮಠಾಧೀಶರಾಗಿ ಜ‌ನರಿಂದ ಗೌರವಿಸಲ್ಪಡುತ್ತಿದ್ದರೂ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಕಾಮಕ್ಕೆ ಬಳಸುತ್ತಿದ್ದರೆಂದು ಪೋಕ್ಸೋ ಪ್ರಕರಣ ದಾಖಲಾಗಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಶ್ರೀಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಮತ್ತೊಂದು ಪ್ರಕರಣದಲ್ಲಿ ಜಾಮೀನು ಇನ್ನೂ ದೊರೆಯ ಕಾರಣ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.

- Advertisement -

ಮುರುಘಾ ಶ್ರೀ ಹೈಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಏಳು ಷರತ್ತುಗಳನ್ನು ವಿಧಿಸುವುದರೊಂದಿಗೆ ಜಾಮೀನು ಮಂಜೂರು ಮಾಡಿದೆ.

ಹೈಕೋರ್ಟ್ ವಿಧಿಸಿರುವ ಷರತ್ತುಗಳಲ್ಲಿ ಒಂದನೇಯದಾಗಿ ಅವರು ಚಿತ್ರದುರ್ಗ ಪ್ರವೇಶಿಸಬಾರದು. ಪಾಸ್ ಪೋರ್ಟೋ ಕೋರ್ಟ್ ವಶಕ್ಕೆ ನೀಡಬೇಕು, ಸಾಕ್ಷ್ಯ ನಾಶಪಡಿಸಬಾರದು, ಇಬ್ಬರು ಶ್ಯೂರಿಟಿಗಳನ್ನು ಒದಿಗಸಬೇಕು, ಇಂತಹ ಕೃತ್ಯಗಳನ್ನು ಪುನರಾವರ್ತಿಸಬಾರದು, ಕೋರ್ಟ್ ಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಬೇಕು ಎಂಬುದು ಇನ್ನುಳಿದ ಷರತ್ತುಗಳಲ್ಲಿ ಸೇರಿವೆ.

- Advertisement -

ಇನ್ನೂ ಒಂದು ಪ್ರಕರಣದಲ್ಲಿ ಜಾಮೀನು ಅರ್ಜಿ ಬಾಕಿ ಇದೆ. ಆ ಕಾರಣ ಪೋಕ್ಸೋ ಕೇಸ್ ನಲ್ಲಿ ಜಾಮೀನು ದೊರೆತರು ಶಿವಮೂರ್ತಿ ಮುರುಘಾ ಷರಣರಿಗೆ ಸದ್ಯಕ್ಕೆ ಜೈಲೇ ಗತಿಯಾಗಿದೆ.



Join Whatsapp