ಉತ್ತರಾಖಂಡ್: ರಾಹುಲ್ ಗಾಂಧಿ ಮತ್ತು ವರುಣ್ ಗಾಂಧಿ ಕೇದಾರನಾಥ ದೇವಸ್ಥಾನದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದಾರೆ. ಪರಸ್ಪರ ಕ್ಷೇಮ ವಿಚಾರಿಸಿ ಸಂತೋಷವನ್ನು ವಿನಿಮಯ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಕೇದಾರನಾಥ ದೇವಾಲಯದಿಂದ ಹೊರ ಹೋಗಯತ್ತಿರುವ ಸಮಯದಲ್ಲಿ ವರುಣ್ ಗಾಂಧಿ ಕುಟುಂಬದೊಂದಿಗೆ ಅಲ್ಲಿಗೆ ತಲುಪಿದ್ದಾರೆ.
ವರುಣ್ ಪುತ್ರಿ ಅನುಸೂಯಾರನ್ನು ಮಾತನಾಡಿಸಿದ ರಾಹುಲ್ ಗಾಂಧಿ ತುಂಬಾ ಸಂತೋಷಪಟ್ಟರು ಎಂದು ವರದಿಗಳು ತಿಳಿಸಿವೆ. ವರುಣ್ ಗಾಂಧಿ ತಮ್ಮ ಕ್ಷೇತ್ರವಾದ ಪಿಲಿಭಿತ್‌ನಲ್ಲಿ ಸಕ್ರಿಯವಾಗಿದ್ದರೂ ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲವಾದ್ದರಿಂದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಈ ಸಂತಸದ ವಿನಿಮಯವು ರಾಜಕೀಯ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಈ ವರ್ಷದ ಆರಂಭದಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾಗ, ಭಾರತ್ ಜೋಡೋ ನಡಿಗೆಗೆ ವರುಣ್ ಗಾಂಧಿ ಅವರನ್ನು ಸ್ವಾಗತಿಸುತ್ತೀರಾ ಎಂದು ಕೇಳಲಾಯಿತು. ಆ ಸಮಯದಲ್ಲಿ ಅವರು ತಮ್ಮ ಸೋದರಸಂಬಂಧಿಯನ್ನು ಪ್ರೀತಿಯಿಂದ ಭೇಟಿಯಾಗಬಹುದು ಮತ್ತು ಅಪ್ಪಿಕೊಳ್ಳಬಹುದು ಆದರೆ ನಮ್ಮಿಬ್ಬರ ಸಿದ್ಧಾಂತಗಳು ಬೇರೆ ಬೇರೆ ಎಂದಿದ್ದರು.