ಶಾಸಕ ವೇದವ್ಯಾಸ್ ಅಧಿಕಾರ ಸಿಕ್ಕಾಗ ದೋಚಿದ್ದು ಬಿಟ್ಟರೆ ಒಂದೂ ಕೆಲಸ ಮಾಡಿಲ್ಲ: ದಿನೇಶ್ ಗುಂಡೂರಾವ್

Prasthutha|

ಮಂಗಳೂರು: ಶಾಸಕ ವೇದವ್ಯಾಸ್ ಅಧಿಕಾರ ಸಿಕ್ಕಾಗ ದೋಚಿದ್ದು ಬಿಟ್ಟರೆ ದೂರ ದೃಷ್ಟಿಯ ಒಂದೂ ಕೆಲಸ ಮಾಡಿಲ್ಲ. ಈಗ ದಿಢೀರನೇ ಗಾಢ ನಿದ್ದೆಯಿಂದ ಎಚ್ಚೆತ್ತು ಕಾಂಗ್ರೆಸ್ ದೂರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

- Advertisement -

ಕಾಂಗ್ರೇಸ್ ಸರಕಾರ ಬಂದ ಮೇಲೆ ಮರಳಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಕೆಲಸ ಮಾಡಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದರು. ಇದಕ್ಕೆ Xನಲ್ಲಿ ತಿರುಗೇಟು ನೀಡಿರುವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿರುವುದಲ್ಲ. ಕಳೆದ 4 ವರ್ಷಗಳಿಂದ ನಿಮ್ಮದೇ ʻಡಬಲ್ ಇಂಜಿನ್ʼ ಸರ್ಕಾರವಿತ್ತು. ಶಾಸಕರು, ಸಚಿವರು, ಸಂಸದರು ಬಿಜೆಪಿಯವರೇ ಆಗಿದ್ದರು. ನಿಮ್ಮ ಅವಧಿಯಲ್ಲೇ ನಿಮಗೆ ಮರಳು ಗಣಿಗಾರಿಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಶಾಸಕ ವೇದವ್ಯಾಸ್‌ ಕಾಮತ್‌ ಗೆ ತಿರುಗೇಟು ನೀಡಿದ್ದಾರೆ.

ಜನರ ಮುಂದೆ ನೂರು ಬಾರಿ ಸುಳ್ಳು ಹೇಳಿ ಅದೇ ಸತ್ಯ ಎಂಬಂತೆ ಬಿಂಬಿಸುವ ಚಾಳಿ ನಿಮ್ಮದು ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.



Join Whatsapp