ಮೈಸೂರು: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಜಾತಿ ಜನಗಣತಿ ವರದಿ ಆಗುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದರು. ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಡಿ ಎಂದು ಹೇಳಿದ್ದಾರೆ. ಆ ವರದಿಯೇ ನನ್ನ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ನಾನೇನು ಮಾಡಲಿ ಎಂದು ಕೇಳಿದ್ದಾರೆ. ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವೇ ತಿಳಿಯದೆ, ಅದರ ಬಗ್ಗೆ ಮಾತನಾಡುವುದಾದರೂ ಹೇಗೆ? ನವೆಂಬರ್ ಒಳಗೆ ವರದಿ ಕೊಡಬಹುದೆನೋ, ಕೊಡಲಿ ತದನಂತರ ನೋಡೋಣ’ ಎಂದು ಸಿಎಂ ಹೇಳಿದ್ದಾರೆ.
ಈಶ್ವರಪ್ಪ ಬಗ್ಗೆ ವ್ಯಂಗ್ಯವಾಡಿದ ಸಿಎಂ, ಈಶ್ವರಪ್ಪ ಒಂದು ಸವಕಲು ನಾಣ್ಯ. ಆ ಕಾರಣಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ. ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಅವರು ಮಾತನಾಡಿಲ್ವಾ? ಈಗ ಅದನ್ನು ಸುಟ್ಟು ಹಾಕುತ್ತೇವೆ ಎಂದರೆ ಅದರ ಅರ್ಥವೇನು? ಈಶ್ವರಪ್ಪ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಡಿ ಎಂದರು.